Thursday, July 2, 2026
Google search engine

Homeದೇಶಭಾರತ-ಜಪಾನ್ ನಡುವೆ ಮಹತ್ವದ ಒಪ್ಪಂದ : ರಕ್ಷಣೆ, ಇಂಧನ ಮತ್ತು AI ವಲಯದಲ್ಲಿ ಹೊಸ ಮೈತ್ರಿ

ಭಾರತ-ಜಪಾನ್ ನಡುವೆ ಮಹತ್ವದ ಒಪ್ಪಂದ : ರಕ್ಷಣೆ, ಇಂಧನ ಮತ್ತು AI ವಲಯದಲ್ಲಿ ಹೊಸ ಮೈತ್ರಿ

ನವದೆಹಲಿ : ಭಾರತ ಮತ್ತು ಜಪಾನ್ ದೇಶಗಳು ರಕ್ಷಣೆ, ಇಂಧನ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸಲು ಮಹತ್ವದ ಒಪ್ಪಂದಗಳಿಗೆ (MoC) ಸಹಿ ಹಾಕಿವೆ. ನವದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಸಾನೈ ತಕಾಯಿಚಿ ಅವರ ಉಪಸ್ಥಿತಿಯಲ್ಲಿ ಈ ಐತಿಹಾಸಿಕ ಒಪ್ಪಂದಗಳು ನಡೆದಿವೆ.

ಆತ್ಮೀಯತೆ ಮೆರೆದ ಪ್ರಧಾನಿ ಮೋದಿ

ಈ ಸಮಾರಂಭದಲ್ಲಿ ಜಪಾನ್ ಪ್ರಧಾನಿ ಸಾನೈ ತಾಕಾಯಿಚಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ‘ಕಿರಿಯ ಸಹೋದರಿ’ ಎಂದು ಸಂಬೋಧಿಸಿರುವುದು ಗಮನ ಸೆಳೆಯಿತು. ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯವು ಕೇವಲ ರಾಜತಾಂತ್ರಿಕ ಸಂಬಂಧವಲ್ಲ, ಬದಲಾಗಿ ನಂಬಿಕೆ ಮತ್ತು ಗಾಢ ಸ್ನೇಹದ ಸಂಕೇತವಾಗಿದೆ ಎಂದು ಮೋದಿ ಬಣ್ಣಿಸಿದರು.

ಹೈದರಾಬಾದ್ ಹೌಸ್‌ನಲ್ಲಿ ನಡೆದ ಈ ಮಹತ್ವದ ಸಭೆಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಹಲವು ತಿಳಿವಳಿಕೆ ಪತ್ರಗಳಿಗೆ (MoC) ಅಂಕಿತ ಹಾಕಿದರು.
ಉಭಯ ದೇಶಗಳ ರಕ್ಷಣಾ ಸಾಮರ್ಥ್ಯ ಮತ್ತು ಭದ್ರತಾ ಸಹಕಾರವನ್ನು ಹೆಚ್ಚಿಸುವುದು. ಸುಸ್ಥಿರ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿಯಲ್ಲಿ ಪರಸ್ಪರ ಸಹಕಾರ. ಕೃತಕ ಬುದ್ಧಿಮತ್ತೆ (Artificial Intelligence) ಮತ್ತು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ನೀಡುವುದು.

ಒಟ್ಟಾರೆ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ ಕಾರ್ಯತಂತ್ರದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವುದು. ಈ ಒಪ್ಪಂದಗಳನ್ನು ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆಯಲ್ಲಿನ ಒಂದು ದೊಡ್ಡ ಹೆಜ್ಜೆ ಎಂದು ಪರಿಗಣಿಸಲಾಗಿದೆ.

RELATED ARTICLES
- Advertisment -
Google search engine

Most Popular