Thursday, July 2, 2026
Google search engine

Homeರಾಜ್ಯಜುಲೈನಲ್ಲಿ ಇರಲ್ಲ ಮೀಟರ್‌ ರೀಡಿಂಗ್‌ !

ಜುಲೈನಲ್ಲಿ ಇರಲ್ಲ ಮೀಟರ್‌ ರೀಡಿಂಗ್‌ !

ಬೆಂಗಳೂರು : ಗೃಹಜ್ಯೋತಿ 200 ಯೂನಿಟ್​ವರೆಗೆ ಉಚಿತ ವಿದ್ಯುತ್ ನೀಡುವ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ. ಅನರ್ಹರಿಗೆ ಗ್ಯಾರಂಟಿ ಯೋಜನೆ ಲಾಭ ಸಿಗಬಾರದೆಂದು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಫಿಲ್ಟರ್ ಮಾಡುತ್ತಿದೆ. ಇದರ ಭಾಗವಾಗಿ ರಾಜ್ಯಾದ್ಯಂತ ಆಪರೇಷನ್ ಗೃಹಜ್ಯೋತಿ ಶುರುವಾಗಿದೆ. ಹೀಗಾಗಿ ಜುಲೈನಲ್ಲಿ ಮೀಟರ್​​​ ರೀಡಿಂಗ್​​ ಇರುವುದಿಲ್ಲ. ಕಳೆದ 3 ತಿಂಗಳ ಸರಾಸರಿ ವಿದ್ಯುತ್​ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ನೀಡಲು ಬೆಸ್ಕಾಂ (BESCOM)​​ ಮುಂದಾಗಿದೆ.

ಹಾಗಾದರೆ ಬೆಸ್ಕಾಂ ಮಾಧ್ಯಮ ಪ್ರಕಟಣೆಯಲ್ಲಿ ಏನಿದೆ?

ಈ ಕುರಿತಾಗಿ ಬೆಂಗಳೂರು ವಿದ್ಯುತ್​​​ ಸರಬರಾಜು ಕಂಪನಿ ನಿಯಮಿತ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನಾ ಕಾರ್ಯಕ್ಕೆ ಬೆಸ್ಕಾಂ ಮೀಟರ್ ರೀಡರ್‌ಗಳನ್ನು ನಿಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಜುಲೈ ತಿಂಗಳಲ್ಲಿ ನಿಯಮಿತ ಮೀಟರ್ ರೀಡಿಂಗ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.

ಮೀಟರ್ ರೀಡಿಂಗ್ ಬದಲಾಗಿ, ಗ್ರಾಹಕರಿಗೆ ಜುಲೈ ತಿಂಗಳಲ್ಲಿ ಸರಾಸರಿ ಬಿಲ್ ನೀಡಲಾಗುತ್ತದೆ. ಅಂದರೆ ಕಳೆದ 3 ತಿಂಗಳ ನಿಮ್ಮ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಜುಲೈ ತಿಂಗಳ ಬಿಲ್ ಅನ್ನು ಸಿದ್ಧಪಡಿಸಲಾಗುತ್ತದೆ.

ಯಾರಿಗೆಲ್ಲಾ ಅನ್ವಯವಾಗಲಿದೆ

ಈ ಹೊಸ ನಿಯಮವು ಹೆಚ್.ಟಿ ಗ್ರಾಹಕರು, 40 ಹೆಚ್.ಪಿ ಮತ್ತು ಅದಕ್ಕಿಂತ ಹೆಚ್ಚಿನ ಲೋಡ್ ಹೊಂದಿರುವ ಎಲ್.ಟಿ ಗ್ರಾಹಕರು, ಸೋಲಾರ್ ರೂಫ್‌ ಟಾಪ್ ಗ್ರಾಹಕರು ಹಾಗೂ ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಈ ಗ್ರಾಹಕರಿಗೆ ಎಂದಿನಂತೆ ನಿಯಮಿತವಾಗಿ ಮೀಟರ್ ರೀಡಿಂಗ್ ಮಾಡಿ ಬಿಲ್ ನೀಡಲಾಗುವುದು ಎಂದು ಬೆಂಗಳೂರು ವಿದ್ಯುತ್​​​ ಸರಬರಾಜು ಕಂಪನಿ ನಿಯಮಿತ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular