Sunday, July 12, 2026
Google search engine

Homeಸಿನಿಮಾಸ್ವರ ಸಾಮ್ರಾಜ್ಞಿ ಎಸ್.ಜಾನಕಿ ನಿಧನ : ಕಂಬನಿ ಮಿಡಿದ ಹಿರಿಯ ನಟಿ ಡಾ.ಉಮಾಶ್ರೀ

ಸ್ವರ ಸಾಮ್ರಾಜ್ಞಿ ಎಸ್.ಜಾನಕಿ ನಿಧನ : ಕಂಬನಿ ಮಿಡಿದ ಹಿರಿಯ ನಟಿ ಡಾ.ಉಮಾಶ್ರೀ

ಬೆಂಗಳೂರು : ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ, ಸ್ವರ ಸಾಮ್ರಾಜ್ಞಿ ಎಸ್.ಜಾನಕಿ ಅವರ ನಿಧನಕ್ಕೆ ವಿಧಾನ ಪರಿಷತ್ ಸದಸ್ಯೆ ಹಾಗೂ ಹಿರಿಯ ನಟಿ ಡಾ.ಉಮಾಶ್ರೀ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಜಾನಕಮ್ಮನವರ ನಿಧನದ ಸುದ್ದಿ ನನಗೆ ಅಪಾರ ದುಃಖವನ್ನುಂಟು ಮಾಡಿದೆ. ತಮ್ಮ ಅಪೂರ್ವ ಕಂಠಸಿರಿಯ ಮೂಲಕ ಅಸಂಖ್ಯಾತ ಸಂಗೀತಾಭಿಮಾನಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿದ್ದ ಅವರು ನಿಜವಾದ ಸ್ವರ ಸಾಮ್ರಾಜ್ಞಿ ಎಂದು ಉಮಾಶ್ರೀ ಹೇಳಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಸುಮಧುರ ಗೀತೆಗಳನ್ನು ಹಾಡಿ ಕೋಟ್ಯಂತರ ಜನರ ಮನಗೆದ್ದಿದ್ದ ಎಸ್.ಜಾನಕಿ ಅವರ ಅಗಲಿಕೆ ಭಾರತೀಯ ಸಂಗೀತ ಹಾಗೂ ಕಲಾ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular