Sunday, July 12, 2026
Google search engine

Homeಸಿನಿಮಾಎಸ್.ಜಾನಕಿಗೆ ಅಂತಿಮ ನಮನ ಸಲ್ಲಿಸಿದ ಕೇರಳಂ ಸಚಿವ ರೋಜಿ ಎಂ.ಜಾನ್

ಎಸ್.ಜಾನಕಿಗೆ ಅಂತಿಮ ನಮನ ಸಲ್ಲಿಸಿದ ಕೇರಳಂ ಸಚಿವ ರೋಜಿ ಎಂ.ಜಾನ್

ಮೈಸೂರು : ಖ್ಯಾತ ಗಾಯಕಿ ಎಸ್.ಜಾನಕಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಕೇರಳಂ ಸರ್ಕಾರದ ಪರವಾಗಿ ಉನ್ನತ ಶಿಕ್ಷಣ ಸಚಿವ ರೋಜಿ ಎಂ.ಜಾನ್ ಪಡೆದು ಗೌರವ ಸಲ್ಲಿಸಿದರು.

ಶನಿವಾರ ಸಂಜೆ ನಿಧನರಾದ ಎಸ್.ಜಾನಕಿ ಅವರ ಪಾರ್ಥಿವ ಶರೀರವನ್ನು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಇರಿಸಲಾಗಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಚಿತ್ರರಂಗದ ಹಿರಿಯ ನಟಿ ಉಮಾಶ್ರೀ, ನಟಿ ಹಾಗೂ ಕೆಎಫ್‌ಸಿಸಿ ಅಧ್ಯಕ್ಷೆ ಜಯಮಾಲಾ, ಸಾಧು ಕೋಕಿಲ, ಕೆ.ಕಲ್ಯಾಣ್, ತಾರಾ ಅನುರಾಧ, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್, ಕೆ.ಮಂಜು, ಮಂಡ್ಯ ರಮೇಶ್ ದಂಪತಿ, ಹಂಸಲೇಖ ದಂಪತಿ, ವಾಣಿ ಹರಿಕೃಷ್ಣ, ವಿನೋದ್ ರಾಜ್, ನವೀನ್ ಸಜ್ಜು, ಸಂಗೀತಾ ಕಟ್ಟಿ ಕುಲಕರ್ಣಿ, ಯೋಗೇಶ್ ದ್ವಾರಕೀಶ್ ಸೇರಿದಂತೆ ಹಲವು ಗಣ್ಯರು ಜಾನಕಮ್ಮ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಇಂದು ಸಂಜೆ ಬೋಗಾದಿ–ಗದ್ದಿಗೆ ರಸ್ತೆಯಲ್ಲಿರುವ ಅವರ ಸ್ವಂತ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.

RELATED ARTICLES
- Advertisment -
Google search engine

Most Popular