ಗದಗ: ಯಾವ ಕಹಳೆಗಳೂ ಊದುತ್ತವೆ ಗೊತ್ತಿಲ್ಲ. ಆದರೆ ನಿಜವಾಗಿಯೂ ಹೇಳುತ್ತೇನೆ ಮುಂದೊಂದು ದಿನ ಉತ್ತರ ಕರ್ನಾಟಕ ಪ್ರತ್ಯೇಕ ಆಗಿಯೇ ಆಗುತ್ತದೆ ಎಂದು ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಹೇಳಿಕೆ ನೀಡಿದ್ದಾರೆ.
ಗದಗ ಜಿಲ್ಲೆ ಮುಂಡರಗಿ ಪಟ್ಟಣದ ಸರ್ಕಾರಿ ಪ್ರಥಮ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡುವ ವೇಳೆ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಪ್ರತ್ಯೇಕ ಉತ್ತರ ಕರ್ನಾಟಕದ ಕುರಿತು ಹೇಳಿಕೆ ನೀಡಿದ್ದಾರೆ.
ಬಹುತೇಖ ವಿಚಾರಗಳಲ್ಲಿ ಉತ್ತರ ಕರ್ನಾಟಕ ಬಹಳಷ್ಟು ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಎಲ್ಲಾ ಪಕ್ಷದ ಸರ್ಕಾರ ರಚನೆ ಮಾಡೋರಿಗೆ ಎಂಎಲ್‌ಎ ಗಳನ್ನ ಕೊಡೋದು ಉತ್ತರ ಕರ್ನಾಕದವರೇ. ಬಿಜೆಪಿ ಇರಬಹುದು. ಕಾಂಗ್ರೆಸ್ ಇರಬಹುದು. ಹೆಚ್ಚು ಶಾಸಕರನ್ನ ಕೊಟ್ಟಿದ್ದು ಉತ್ತರ ಕರ್ನಾಟಕ ಎಂದು ಹೇಳಿದ್ದಾರೆ.
ಇಂದು ಅದೆಷ್ಟೋ ಶಾಲಾ ಕಾಲೇಜುಗಳು ಸೋರುತ್ತಿವೆ. ಮಕ್ಕಳು ಕುಳಿತುಕೊಂಡು ಪಾಠ ಕೇಳು ಆಗುತ್ತಿಲ್ಲ. ಇದನ್ನೆಲ್ಲ ನೋಡಿದಾಗ ಬಹಳಷ್ಟು ಬೇಸರವಾಗುತ್ತೆ. ಆದಷ್ಟು ಬೇಗ ಶಾಲೆಗಳನ್ನು ದುರಸ್ತಿ ಮಾಡಿಸಲು ಕ್ರಮವಹಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.