Tuesday, July 14, 2026
Google search engine

Homeರಾಜ್ಯಸುದ್ದಿಜಾಲ72ನೇ ವರ್ಷದ ಸಂಭ್ರಮ: ಶ್ರೀ ವೆಂಕಟೇಶ ಬೇಕರಿ ಮಾಲೀಕ ಬದ್ರಿ ನಾರಾಯಣ್ ಅವರಿಗೆ ಜೈಹಿಂದ್ ಪ್ರತಿಷ್ಠಾನದಿಂದ...

72ನೇ ವರ್ಷದ ಸಂಭ್ರಮ: ಶ್ರೀ ವೆಂಕಟೇಶ ಬೇಕರಿ ಮಾಲೀಕ ಬದ್ರಿ ನಾರಾಯಣ್ ಅವರಿಗೆ ಜೈಹಿಂದ್ ಪ್ರತಿಷ್ಠಾನದಿಂದ ಸನ್ಮಾನ

ಚಾಮರಾಜನಗರ: ಜೈಹಿಂದ್ ಪ್ರತಿಷ್ಠಾನ, ಋಗ್ವೇದಿ ಯೂತ್ ಕ್ಲಬ್ ವತಿಯಿಂದ ಶ್ರೀ ವೆಂಕಟೇಶ ಬೇಕರಿ ಮಾಲೀಕರಾದ ಶ್ರೀ ಬದ್ರಿ ನಾರಾಯಣ್ ರವರನ್ನು ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಸುರೇಶ್ ಎನ್ ಋಗ್ವೇದಿ ರವರು ಗೌರವಿಸಿ ಸನ್ಮಾನಿಸಿದರು.

ಅವರು ಶ್ರೀ ವೆಂಕಟೇಶ ಬೇಕರಿ 72 ನೇ ವರ್ಷದ ಶುಭ ಸಂದರ್ಭದಲ್ಲಿ ಸುರೇಶ್ ಎನ್ ಋಗ್ವೇದಿ ಸನ್ಮಾನಿಸಿ ರುಚಿ ಶುಚಿಯಾಗಿ ಚಾಮರಾಜನಗರದಲ್ಲಿ ಸಾರ್ವಜನಿಕರಿಗೆ ಬೇಕರಿಯ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿರುವ ಶ್ರೀ ವೆಂಕಟವರದಾಚಾರ್ ಮಕ್ಕಳಾದ ಶ್ರೀ ಬದ್ರಿ ನಾರಾಯಣ ರವರು ಗ್ರಾಹಕರಿಗೆ ಉತ್ತಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ ಬೇಕರಿಯ ಪದಾರ್ಥಗಳು ದೇಶ-ವಿದೇಶದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದು ಚಾಮರಾಜನಗರದ ಕೀರ್ತಿಯನ್ನು ಹರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 1954 ರಲ್ಲಿ ಪ್ರಾರಂಭವಾಗಿ ಇಂದಿಗೂ ಬಹಳ ಯಶಸ್ವಿಯಾಗಿ ಮುಂದುವರಿಯುತ್ತಿರುವ ಶ್ರೀ ವೆಂಕಟೇಶ ಬೇಕರಿ ನವೀಕರಣದೊಂದಿಗೆ ಪ್ರಾರಂಭವಾಗಿರುವುದು ಸಂತೋಷ ತಂದಿದೆ.ಕಡುಕಷ್ಟದಲ್ಲಿ 7 ದಶಕಗಳ ಹಿಂದೆ ಆರಂಭಿಸಿದ ಬೇಕರಿ ಅನೇಕ ಕಷ್ಟದ ಸಂದ ರ್ಭದಲ್ಲಿ.ಊರಿಗೆ ಹರಡಿದ ಫ್ಲೂ ಜ್ವರದ ಕಾಲದಲ್ಲಿ ಉಚಿತವಾಗಿ ಬ್ರೆಡ್ಡು ಬನ್ನುಗಳನ್ನು ನೀಡುವ ಮೂಲಕ ಸಂಕಷ್ಟ ಕಾಲದಲ್ಲಿ ನಾಗರೀಕರಿಗೆ ನೆರವಾಗಿರುವುದನ್ನು ಸ್ಮರಿಸಿಕೊಳ್ಳಬೇಕು. ಉತ್ತಮ ಗುಣಮಟ್ಟದ ಪದಾರ್ಥಗಳನ್ನು ಗ್ರಾಹಕರಿಗೆ ನೀಡಿದಾಗ ಗೌರವ ಮತ್ತು ಪ್ರೀತಿ ಹೆಚ್ಚುತ್ತದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಟೇಶ ಬೇಕರಿ ಮಾಲೀಕರಾದ ಬದ್ರಿ ನಾರಾಯಣ್ ರವರು ಚಾಮರಾಜನಗರದಲ್ಲಿ 72 ವರ್ಷಗಳಿಂದ ಬೇಕರಿಯನ್ನು ಆರಂಭಿಸಿ ನಮ್ಮ ತಂದೆ ಮತ್ತು ತಾಯಿ ವೆಂಕಟವರದಾಚಾರ್ ಹಾಗೂ ಪದ್ಮ ರವರು ಸ್ಥಾಪಿಸಿದ ಬೇಕರಿ ಲಕ್ಷಾಂತರ ಗ್ರಾಹಕರಿಗೆ ಸೇವೆಯನ್ನು ಸಲ್ಲಿಸಿದೆ. ಇಂದು ನಮ್ಮನ್ನು ಸನ್ಮಾನಿಸುತ್ತಿರುವುದು ಸಂತೋಷ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಲಯನ್ ಸಂಸ್ಥೆಯ ಮಾಜಿ ಅಧ್ಯಕ್ಷ ಚೇತನ್ , ಉಪನ್ಯಾಸಕರ ಸುರೇಶ್ ಕುಮಾರ್, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ, ಸಾನಿಕ, ಶಾವ್ಯ ಇದ್ದರು.

RELATED ARTICLES
- Advertisment -
Google search engine

Most Popular