ಮೈಸೂರು: ವಕೀಲರ ಹಿತರPಣೆಗಾಗಿಅಗತ್ಯವಿರುವಕಾಯ್ದೆಯನ್ನು ಮುಂದಿನ ಅಧಿವೇಶನದಲ್ಲಿಜಾರಿಗೆತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ನಗರದ ವಸ್ತು ಪ್ರದರ್ಶನ ಪ್ರಾಧಿಕಾರಆವರಣದಲ್ಲಿ ಶನಿವಾರಕರ್ನಾಟಕರಾಜ್ಯ ವಕೀಲರ ಪರಿಷತ್ತು ಆಯೋಜಿಸಿದ್ದ ೧೦ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದಅವರು, ಕಳೆದ ಸರ್ಕಾರದಅವಧಿಯಲ್ಲಿಯೇ ಈ ಕಾಯ್ದೆಯಡ್ರಾಫ್ಟ್ ಸಿದ್ಧವಾಗಿತ್ತು. ಈ ಸಂಬಂಧ ನಾನು ಬೆಳಗಾವಿ ಅಧಿವೇಶನದಲ್ಲಿಕೂಡ ಮಾತನಾಡಿದ್ದೆ. ಈಗ ನಮ್ಮದೇ ಸರ್ಕಾರ ಬಂದಿದೆ. ಈ ಬಾರಿಯಅಧಿವೇಶನದಲ್ಲಿ ಮಂಡಿಸಬೇಕಿತ್ತು. ಆದರೆ ಕೆಲವು ತಾಂತ್ರಿಕಕಾರಣದಿಂದಅದು ಸಾಧ್ಯವಾಗಲಿಲ್ಲ. ಆದರೆ ಮುಂದಿನ ಅಧಿವೇಶನದಲ್ಲಿಖಂಡಿತವಾಗಿಯೂ ಮಂಡಿಸಲಾಗುವುದುಎಂದರು.
ವಕೀಲ ವೃತ್ತಿಗೆರಣೆ ಕೊಡಬೇಕಾದದ್ದು ನಮ್ಮಕರ್ತವ್ಯ. ನಿಮ್ಮ ಬೇಡಿಕೆಗೆ ನನ್ನ ಸಹಮತವಿದೆ. ಇದನ್ನು ಸರ್ಕಾರದ ಆರನೇ ಗ್ಯಾರಂಟಿ ಎಂದು ತಿಳಿಯಿರಿ. ಇನ್ನು ಬೆಂಗಳೂರಿನಲ್ಲಿ ಕರ್ನಾಟಕ ವಕೀಲರ ಪರಿಷತ್ ಹೈ ಕೋರ್ಟ್‌ಕಟ್ಟಡದಲ್ಲಿಯೇಕಾರ್ಯ ನಿರ್ವಹಿಸುತ್ತಿದೆ. ಅದಕ್ಕೆ ಪ್ರತ್ಯೇಕಕಟ್ಟಡ ಬೇಕು ಎಂದು ಕೇಳಿದ್ದೀರಿ. ವಕೀಲರ ಪರಿಷತ್ತಿಗೆ ಸ್ವಂತಕಟ್ಟಡ ಬೇಕು. ಆದರೆ ಬೆಂಗಳೂರಿನಲ್ಲಿ ಜಾಗದಕೊರತೆ ಹೆಚ್ಚಿದೆ. ನಾನು ಪರಿಷತ್ತಿಗೆ ಅಗತ್ಯ ವಿರುವಜಾಗ ಕೊಡಲು ಸಿದ್ಧನಿzನೆ. ನೀವು ಹತ್ತಿರದಲ್ಲಿ ಸ್ಥಳ ಗುರುತಿಸಿ ತಿಳಿಸಿದರೆ ನಾನು ಜಾಗ ನೀಡಲು ಸಿದ್ಧ ಎಂದರು.ಇನ್ನು ಉಳಿದ ಡಿಮ್ಯಾಂಡ್‌ಗಳನ್ನು ಪರಿಶೀಲಿಸುತ್ತೇನೆ. ನಿಮ್ಮಅಗತ್ಯವಿರುವ ಬೇಡಿಕೆಯನ್ನುಈಡೇರಿಸಲು ಸಿದ್ಧನಿzನೆ. ಅಂತೆಯೇಎಲ್ಲಾ ವಿಷಯದಲ್ಲಿಯೂ ಸಕಾರಾತ್ಮಕವಾಗಿಇರುತ್ತೇನೆ. ಈ ಸಮ್ಮೇಳನ ಪ್ರತಿಎರಡು ವರ್ಷಕ್ಕೊಮ್ಮೆಯಾದರೂ ನಡೆಯಬೇಕು. ಇಲ್ಲಿ ವಕೀಲರ ಸಮಸ್ಯೆ ಮಾತ್ರವಲ್ಲದೆಕಕ್ಷಿದಾರರ ಸಮಸ್ಯೆ, ಸಮಾಜದ ಸಮಸ್ಯೆಯ ಬಗ್ಗೆ ವ್ಯಾಪಕಚರ್ಚೆ ನಡೆಯಬೇಕುಎಂದರು.
ನಿಮ್ಮ ಈ ಚರ್ಚೆಗಳು ಮತ್ತುತೀರ್ಮಾನ ಸಮಾಜಮುಖಿಯಾಗಿರಲಿ. ಸಂವಿಧಾನದದೇಯೋzಶಕ್ಕೆ ಬದ್ಧರಾಗಿ ನಾವು ನಡೆದುಕೊಳ್ಳಬೇಕು. ಸಂವಿಧಾನದ ಆಶಯಗಳನ್ನು ಎಷ್ಟೇ ಕಷ್ಟವಾದರೂ ಉಳಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ವಕೀಲರಜವಾಬ್ದಾರಿ ಹೆಚ್ಚಿದೆ. ತಳವರ್ಗ, ಆರ್ಥಿಕವಾಗಿ ಶಕ್ತಿ ಇಲ್ಲದಜನರ ಬಗ್ಗೆ ಕನಿಕರದ ಬದಲಿಗೆ ಸಹಾಯ ಮಾಡುವ ಮನಸ್ಸುಇರಬೇಕು. ಸಮಾಜದಲ್ಲಿಇರುವಅಸಮಾನತೆತೊಡೆದುಹಾಕಲು ಪ್ರಯತ್ನಿಸಬೇಕು. ಅಂಬೇಡ್ಕರ್‌ಅವರು ಮಾಡಿದ ಐತಿಹಾಸಿಕ ಭಾಷಣವನ್ನುಎಲ್ಲರೂಓದಿದರೆ ಸಾಮಾಜಿಕಜವಾಬ್ದಾರಿ ಹೆಚ್ಚಾಗುತ್ತದೆ. ಸಮಾಜ ನನಗೇನು ಮಾಡಿದೆಎನ್ನುವುದಕ್ಕಿಂತ ನಾನು ಸಮಾಜಕ್ಕೆ ಏನು ಮಾಡಿದೆಎಂದು ಕೇಳಿಕೊಳ್ಳುವುದು ಮುಖ್ಯ. ಆ ದೃಷ್ಟಿಯಿಂದಚಿಂತನೆ ಮಾಡಬೇಕುಎಂದುಅವರು ಕಿವಿಮಾತು ಹೇಳಿದರು.
ಕೆಳ ಹಂತದ ನ್ಯಾಯಾಲಯಗಳಲ್ಲಿ ಮೀಸಲಾತಿಇದೆ. ಮೇಲ್ಮಟ್ಟದ ನ್ಯಾಯಾಲಯದಲ್ಲಿ ಮೀಸಲಾತಿಇಲ್ಲ. ಅಲ್ಲಿ ಮೀಸಲಾತಿಜಾರಿಯಾದರೆ ಹೆಚ್ಚು ಉಪಯುಕ್ತವಾದ ನ್ಯಾಯ ನೀಡಲು ಸಾಧ್ಯ. ಸಂವಿಧಾನ ವಿರೋಧಿಸುವವರುಇzರೆ. ಸಂವಿಧಾನಓದದವರನ್ನೇಜಡ್ಜ್ ಮಾಡಿದರೆ ನ್ಯಾಯ ಹೇಗೆ ಸಿಗುತ್ತದೆ. ಬಡವರಿಗೆ ನ್ಯಾಯ ಸಿಗುವುದು ಯಾವಾಗ? ಎಂದುಅವರು ಪ್ರಶ್ನಿಸಿದರು.
ಸಂವಿಧಾನ ಬರುವ ಮುನ್ನಒಂದುರೀತಿಯ ನ್ಯಾಯದಾನ ವ್ಯವಸ್ಥೆಇತ್ತು. ಸಂವಿಧಾನ ಬಂದ ನಂತರ ಭಿನ್ನವಾಗಿದೆ. ಬ್ರಿಟಿಷರಕಾಲದಲ್ಲಿ ಹಾಗೂ ಸ್ವಾತಂತ್ರ್ಯದೊರೆತ ನಂತರ ಭಿನ್ನವಾಗಿದೆ. ಅದಕ್ಕೂ ಮುನ್ನರಾಜಮಹಾರಾಜರು ನ್ಯಾಯತೀರ್ಮಾನ ಮಾಡುತ್ತಿದ್ದರು. ಅವರತೀರ್ಮಾನ ಮನುವಾದದಂತೆತೀರ್ಮಾನಿಸುತ್ತಿದ್ದರು. ಜಾತಿ ವ್ಯವಸ್ಥೆ ಬಲವಾಗಿದ್ದುದರಿಂದಒಂದೇರೀತಿಯತಪ್ಪಿಗೆ ಬೇರೆ ಬೇರೆ ಶಿಕ್ಷೆಗಳಿದ್ದವು. ಶ್ರೀಮಂತರಿಗೆ, ಮೇಲ್ಜಾತಿಯವರಿಗೆ, ಕೆಲವರ್ಗದವರಿಗೆ, ಬಡವರಿಗೆ ಬೇರೆರೀತಿಯ ಶಿಕ್ಷೆ ಆಗುತ್ತಿತ್ತು. ಸಂವಿಧಾನ ಬಂದ ನಂತರ ಸಮಾನತೆ ಬಂದಿದೆ. ಕಾನೂನಿನ ದೃಷ್ಟಿಯಲ್ಲಿಎಲ್ಲರೂ ಸಮಾನರುಎಂದರುಕರ್ನಾಟಕ ವಕೀಲರ ಪರಿಷತ್ತು ಅನೇಕ ಪ್ರತಿಭಾವಂತರನ್ನು ಒಳಗೊಂಡಿದೆ. ಅನೇಕಾರು ಹೈ ಕೋರ್ಟ್, ಸುಪ್ರಿಂಕೋರ್ಟ್ ವಕೀಲರನ್ನು ನೀಡಿದೆ. ಅನೇಕರು ನ್ಯಾಯಾಧೀಶರಾಗಿದ್ದಾರೆ. ಯಾರಿಗೆ ಅವಕಾಶ ದೊರಕಿದೆಯೋಅವರೆಲ್ಲ ಬುದ್ಧಿವಂತರು, ಅವಕಾಶ ದೊರಕದವರುದಡ್ಡರು. ನಾನು ವಕೀಲನಾದಾಗಕುರುಬ ಜನಾಂಗದಿಂದ ನಾನೊಬ್ಬನೇಇದ್ದೆ. ಏಕೆಂದರೆ ಹಿಂದೆ ವಕೀಲಗಿರಿಯನ್ನು ಮೇಲ್ವರ್ಗದವರೇ ಮಾಡುತ್ತಿದ್ದರು. ನಮ್ಮೂರಿನಲ್ಲಿಚೆನ್ನಪ್ಪಯ್ಯಎಂಬುವರನ್ನು ನಮ್ಮತಂದೆ ಕೇಳಿದಾಗ, ಕುರುಬರು ವಕೀಲರಾಗಲು ಸಾಧ್ಯವೇನಯ್ಯ ಬೇಡಎಂದು ಹೇಳು ಎಂದಿದ್ದರಂತೆ. ನಾನು ಚೆನ್ನಪ್ಪಯ್ಯನ ಮಾತು ಕೇಳಿ ಕಾನೂನು ಓದಿದ್ದರೆ ಮುಖ್ಯಮಂತ್ರಿಯೇಆಗುತ್ತಿರಲಿಲ್ಲ. ಇಂತಹ ಪಟ್ಟಭದ್ರ ಹಿತಾಸಕ್ತಿಗಳು ಯಾವಾಗಲೂಇರುತ್ತಾರೆಎಂದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ: ಹದಿನಾಲ್ಕು ವರ್ಷಗಳ ನಡೆಯುತ್ತಿರುವ ೧೦ನೇ ರಾಜ್ಯ ವಕೀಲರ ಪರಿಷತ್ ಸಮ್ಮೇಳನದಲ್ಲಿ ವಕೀಲರ ನ್ಯಾಯಯುತ ಬೇಡಿಕೆಈಡೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮ್ಮೇಳನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರಾಜ್ಯ ವಕೀಲರ ಪರಿಷತ್ತಿನಅಧ್ಯPಎಚ್.ಎಲ್. ವಿಶಾಲ್‌ರಘು, ವಕೀಲರ ಹಲವು ಬೇಡಿಕೆಈಡೇರಿಸುವ ಕೆಲಸ ಮಾಡಬೇಕು. ನಮ್ಮ ಹಕ್ಕುಗಳಿಗೆ ಹೋರಾಟ ಮಾಡಬೇಕಿದೆ. ವಕೀಲ ವೃತ್ತಿಯ ಮೂಲಕ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ನಮ್ಮ ಬೇಡಿಕೆಈಡೇರಿಸುವಂತೆಕೋರಿದರು. ಬಳಿಕ ಮೂರು ಪುಟಗಳ ಮನವಿ ಪತ್ರ ಸಲ್ಲಿಸಿದರು.
ರಾಜ್ಯದಲ್ಲಿ ವಕೀಲರ ಹಿತರPಣೆಕಾಯ್ದೆ ಜಾರಿಗೊಳಿಸುವುದು, ವಕೀಲರಕಲ್ಯಾಣಕಾರ್ಯಕ್ರಮಕ್ಕೆತಿದ್ದುಪಡಿತರುವುದು, ವಕೀಲರುಇzಗ ಆನೆಬಲವಿದ್ದರೆ, ಮೃತಪಟ್ಟಾಗಕುಟುಂಬ ನಿರ್ವಹಣೆಗೆತೊಂದರೆಆಗುತ್ತದೆ. ಆದ್ದರಿಂದ ಪ್ರತಿ ವರ್ಷ ಬಜೆಟ್ ನಲ್ಲಿ ಹೊಂದಾಣಿಕೆಅನುದಾನ ಮೀಸಲಿಡುವುದು, ೧೯೬೧ರಲ್ಲಿ ಸ್ಥಾಪನೆ ಆಗಿರುವ ವಕೀಲರಪರಿಷತ್ತಿಗೆ ಸ್ವಂತಕಟ್ಟಡ ನಿರ್ಮಿಸಲು ಸೂಕ್ತ ನಿವೇಶನ ಒದಗಿಸುವುದು, ವಕೀಲರು ಮತ್ತುಕುಟುಂಬದವರಿಗೆ ವಿಮೆ ಯೋಜನೆಜಾರಿಗೆತರಬೇಕು, ರಾಷ್ಟ್ರೀಯ ಹೆzರಿರಸ್ತೆಯಲ್ಲಿಟೋಲ್ ವಿನಾಯಿತಿ ನೀಡಬೇಕುಎಂದು ಆಗ್ರಹಿಸಿದರು.
ಬೆಂಗಳೂರು ಮತ್ತುಜಿ ಕೇಂದ್ರಗಳಲ್ಲಿ ವಕೀಲರ ಭವನ ನಿರ್ವಾಣಕ್ಕೆ ನಿವೇಶನ ಕಲ್ಪಿಸುವುದು, ಇಂದಿನ ಮಾರುಕಟ್ಟೆದರದಲ್ಲಿ ವಕೀಲರಿಗೆ ಸ್ವಂತ ನಿವೇಶನ ಖರೀದಿಸಲು ಸಾಧ್ಯವಾಗದಕಾರಣ ಗೃಹ ನಿರ್ಮಾಣರಚನೆ ಮಾಡಿ ನಿವೇಶನಗಳನ್ನು ಹಂಚಿಕೆ ಮಾಡಬೇಕು, ಹದಿನೈದು ವರ್ಷಗಳ ಕಾಲ ಸೇವೆ ಮಾಡಿದವರಿಗೆ ನಾಲ್ಕು ಲP ಮತ್ತು ೩೦ ವರ್ಷಗಳ ಕಾಲ ವೃತ್ತಿ ಮಾಡಿದವರಿಗೆ ೮ ಲP ಸಿಗುವುದರಿಂದ ಪಿಂಚಣಿಯೋಜನೆ ಜಾರಿಗೊಳಿಸಬೇಕು, ಶಿPಕರ ಮತ್ತು ಪದವೀಧರರಕ್ಷೇತ್ರದಂತೆ ವಕೀಲರಿಗೆಒಂದು ಪರಿಷತ್ತಿನ ಸ್ಥಾನವನ್ನು ಮೀಸಲಿಡಬೇಕುಎಂದುಅವರು ಒತ್ತಾಯಿಸಿದರು.
ಕಾನೂನು ಸಚಿವಎಚ್.ಕೆ. ಪಾಟೀಲ್, ಜಿಲ್ಲಾಉಸ್ತುವಾರಿ ಸಚಿವಡಾ.ಎಚ್.ಸಿ. ಮಹದೇವಪ್ಪ, ಭಾರತೀಯ ಬಾರ್‌ಕೌನ್ಸಿಲ್‌ಅಧ್ಯP ಮನನ್‌ಕುಮಾರ್ ಮಿಶ್ರ, ನ್ಯಾ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ, ಅಡ್ವೊಕೇಟ್‌ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಕರ್ನಾಟಕ ಬಾರ್‌ಕೌನ್ಸಿಲ್‌ನಉಪಾಧ್ಯP ವಿನಯ್ ವಿ. ಮಂಗಳೇಕರ್ ಮೊದಲಾದವರುಇದ್ದರು.