Sunday, April 20, 2025
Google search engine

Homeಸ್ಥಳೀಯಏಕರೂಪ ನಾಗರಿಕ ಸಂಹಿತೆಯ ಕುರಿತು ಗಂಭೀರ ಚರ್ಚೆಗಳಾಗಲಿ

ಏಕರೂಪ ನಾಗರಿಕ ಸಂಹಿತೆಯ ಕುರಿತು ಗಂಭೀರ ಚರ್ಚೆಗಳಾಗಲಿ

ಮೈಸೂರು: ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯ ಜಾರಿ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆಯ ಕುರಿತು ನಮಗೆ ಎಲ್ಲವೂ ತಿಳಿದಿದೆ ಎನ್ನುವವರು ಮತ್ತು ತಿಳಿದಿಲ್ಲ ಎನ್ನುವವರ ನಡುವೆಗೊಂದಲ ಆತಂಕಗಳು ಮನೆ ಮಾಡಿವೆ. ಭಾರತದ ಹೆಣ್ಣುಮಕ್ಕಳಿಗೆ ಅದರಲ್ಲೂ ಮುಸ್ಲಿಂ ಹೆಣ್ಣುಮಕ್ಕಳಿಗೆ ಧಾರ್ಮಿಕ ಸಂಕೋಲೆಗಳಿಂದ ಬಿಡುಗಡೆ ನೀಡಬಹುದಾದಏಕರೂಪ ನಾಗರಿಕ ಸಂಹಿತೆಯಕುರಿತು ನಾವು ಇನ್ನು ಮುಂದಾದರೂ ಗಂಭೀರವಾದ ಚರ್ಚೆಗಳನ್ನು ಮಾಡಬೇಕಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶಎನ್.ಕುಮಾರ್‌ ಅಭಿಪ್ರಾಯ ಪಟ್ಟರು.

ವಿದ್ಯಾವರ್ಧಕ ಕಾನೂನು ಕಾಲೇಜು ಆಯೋಜಿಸಿದ್ದ ಹಿರಿಯ ರಾಜಕಾರಣಿ, ಶಿಕ್ಷಣ ತಜ್ಞಕೆ.ಪುಟ್ಟಸ್ವಾಮಿಯವರ ನೆನಪಿನ ನಾಲ್ಕನೇ ದತ್ತಿ ಉಪನ್ಯಾಸ ಏಕರೂಪ ನಾಗರೀಕ ಸಂಹಿತೆ -ಸಂವಿಧಾನಾತ್ಮಕ ಆದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ಸ್ವಾತಂತ್ರ್ಯ ಚಳವಳಿಯ ಮುಂಚೂಣಿಯಲ್ಲಿದ್ದ ನಮ್ಮ ಬಹುತೇಕರಾಷ್ಟ್ರ ನಾಯಕರು ವಕೀಲರಾಗಿದ್ದರು ಅನ್ನುವುದನ್ನು ನಾವೆಲ್ಲ ಗಮನಿಸಲೇಬೇಕಿದೆ. ಹೀಗಾಗಿ ಸ್ವಾತಂತ್ರ್ಯೋತ್ತರ ಭಾರತವನ್ನುಗಟ್ಟಿಯಾಗಿಕಟ್ಟಲು ನಮ್ಮರಾಷ್ಟ್ರ ನಾಯಕರ ಕಾನೂನಿನ ಜ್ಞಾನಅಪಾರ ಪ್ರಮಾಣದಲ್ಲಿ ನೆರವಿಗೆ ಬಂದಿವೆ. ಈ ಹೊಸತಲೆಮಾರಿಗೆ ಸ್ಫೂರ್ತಿಕೊಡಬೇಕಿರುವ ಹೀರೋಗಳು ನ್ಯಾಯವಾದಿಗಳಾಗಿದ್ದರು ಎಂಬುದು ಗಮನಾರ್ಹ. ೧೪೦ ಕೋಟಿ ಜನರನ್ನೊಳಗೊಂಡ ಹತ್ತಾರುಧರ್ಮ, ಮತ, ಜಾತಿಗಳಿರುವ ಭಾರತದಲ್ಲಿಏಕರೂಪ ನಾಗರೀಕ ಸಂಹಿತೆಯ ಚರ್ಚೆಗಳು ಇನ್ನಾದರೂ ಶುರುವಾಗಿದೆಯಲ್ಲಎನ್ನುವತೃಪ್ತಿಪಡಬೇಕಿದೆ. ಈ ಹಂತದಲ್ಲಿಅನೇಕರಲ್ಲಿ ಗೊಂದಲಗಳಿರುವುದು ಸಹಜವೇ. ಏಕರೂಪ ನಾಗರೀಕ ಸಂಹಿತೆಯೊಳಗಿನ ಅಂಶಗಳು ಹೀಗಾಗಲೇ ಭಾರತ ಸಂವಿಧಾನದಲ್ಲಿಅಡಕಗೊಂಡಿದೆ. ಈ ನಿಟ್ಟಿನಲ್ಲಿಕೇಂದ್ರದ ಕಾನೂನು ಆಯೋಗವು ಹಲವಾರು ಕಾನೂನು ತಜ್ಞರಿಗೆತಮ್ಮ ಸಲಹೆಗಳನ್ನು ನೀಡುವಂತೆ ಕೇಳಿಕೊಂಡಿತ್ತು. ಆದರೆ, ಕೆಲವು ತಜ್ಞರುಯಾವಕಾರಣಕ್ಕೂಏಕರೂಪ ನಾಗರೀಕ ಸಂಹಿತೆಜಾರಿಯಾಗಲೇಬಾರದುಎಂದು ಸಲಹೆಗಳನ್ನು ನೀಡಿದ್ದಾರೆ. ಸರಿಯಾದಚರ್ಚೆಯನ್ನೇ ಮಾಡದೆ ಈ ರೀತಿ ಸಲಹೆ ನೀಡುವುದು ಎಷ್ಟು ಸರಿ ಹೇಳಿದರು.

ಏಕರೂಪ ನಾಗರಿಕ ಸಂಹಿತೆಯನ್ನುಚರ್ಚಿಸುವಾಗ ವ್ಯಕ್ತಿಯೊಬ್ಬನುರೂಪುಗೊಂಡಿರುವಧಾರ್ಮಿಕ, ಸಾಮಾಜಿಕ, ರಾಜಕೀಯ, ಕಾನೂನು ಮತ್ತು ಸಾಂವಿಧಾನಿಕ ಆಯಾಮಗಳಿಂದ ನೋಡಬೇಕಿದೆ. ನಾವು ಭಾರತದಇತಿಹಾಸವನ್ನು ಕೇವಲ ಒಂದು ಸಾವಿರ ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಭಾರತವನ್ನು ೮೦೦ ವರ್ಷಗಳು ಮೊಘಲರು ಹಾಗೂ ೨೦೦ ವರ್ಷಗಳ ಕಾಲ ಬ್ರಿಟಿಷರು ಆಳ್ವಿಕೆ ಮಾಡಿದ್ದಾರೆ. ಇಷ್ಟಕ್ಕೆ ನಾವು ನಮ್ಮಇತಿಹಾಸವನ್ನು ಬರಿಯ ಸಾವಿರ ವರ್ಷಗಳಿಗೆ ಮಿತಿಗೊಳಿಸಿಕೊಳ್ಳುವುದು ತಪ್ಪಲ್ಲವೇ, ಮೊಘಲರಿಂದಾಗದ ಭಾರತದಛಿದ್ರತೆಯನ್ನು ಮಾಡಿದ್ದು ಬ್ರಿಟಿಷರುಎಂದುಅಭಿಪ್ರಾಯಪಟ್ಟರು.
ಭಾರತ ಪಾಕಿಸ್ತಾನಗಳ ವಿಭಜನೆಯ ಸಂದರ್ಭದಲ್ಲಿ ಭಾರತಯಾವಕಾರಣಕ್ಕೂಎರಡು ರಾಷ್ಟ್ರಗಳ ಸಿದ್ಧಾಂತವನ್ನು ಒಪ್ಪಲಿಲ್ಲ. ಒಂದುದೇಶಒಂದು ಸಿದ್ಧಾಂತ ಎಂಬುದು ಆಗಿನ ಭಾರತದ ನಿಲುವಾಗಿತ್ತು. ಹೀಗಾಗಿಯೇಇವತ್ತಿಗೂ ಪಾಕಿಸ್ತಾನ ಧರ್ಮದ ಮೇಲೆ ನಿಂತಿದ್ದರೆ, ಭಾರತಜಾತ್ಯತೀತ ಸಿದ್ಧಾಂತದ ಮೇಲೆ ನಿಂತಿದೆ. ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳು ಭಾರತ ಸಂವಿಧಾನದ ಶಕ್ತಿ ಎಂದು ಹೇಳಬಹುದು. ಇಷ್ಟರ ನಡುವೆಯೂ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ಆ ಧರ್ಮದ ಮಹಿಳೆಯೇ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದನ್ನು ನಾವು ಈಗಲೂ ಕಾಣಬಹುದಾಗಿದೆ. ಈ ಎಲ್ಲ ಬಿಕ್ಕಟ್ಟಿಗೂಏಕರೂಪ ನಾಗರೀಕ ಸಂಹಿತೆಒಂದು ಪರಿಹಾರದ ಸಾಧನವಾಗಿ ನಮಗೆ ಕಾಣಬಹುದುಎಂದುಎನ್.ಕುಮಾರ್ ಹೇಳಿದರು.

ಸತಿಪದ್ಧತಿ, ದೇವದಾಸಿ ಪದ್ಧತಿಯಂತಹಅತ್ಯಂತಕ್ರೂರಅಮಾನವೀಯ ಆಚರಣೆಗಳು ಸಂಪೂರ್ಣ ನಿರ್ಮೂಲನೆಗೆ ಕಾರಣವಾಗಿದ್ದೇ ಭಾರತದ ಸತಿಪದ್ಧತಿ, ದೇವದಾಸಿ ಪದ್ಧತಿ ನಿಷೇಧದಂತಹ ಕಾನೂನುಗಳು. ಈಗ ಮುಸ್ಲಿಮ್ ಹೆಣ್ಣುಮಕ್ಕಳ ಶೋಷಣೆಯೂಏಕರೂಪ ನಾಗರೀಕ ಸಂಹಿತೆಯಜಾರಿಯಿಂದ ನಿರ್ಮೂಲನೆ ಆಗಬಹುದು ಎಂಬ ಆಶಾವಾದ ನನ್ನದಾಗಿದೆಎಂದು ಹೇಳಿದರು.
ಉಪನ್ಯಾಸದ ನಂತರಏಕರೂಪ ನಾಗರೀಕ ಸಂಹಿತೆಜಾರಿಕುರಿತು ವಿದ್ಯಾರ್ಥಿ ಶಿಕ್ಷಕರ ಹತ್ತಾರು ಪ್ರಶ್ನೆಗಳಿಗೆ ನ್ಯಾಯಮೂರ್ತಿಎನ್.ಕುಮಾರ್‌ಅವರುಉತ್ತರ ನೀಡಿದರು. ಈ ಸಂವಾದದಲ್ಲಿ ಸದರಿ ಸಂಹಿತೆಯಜಾರಿಕುರಿತ ಪರವಿರೋಧದತೀವ್ರವಾದ ಚರ್ಚೆಗಳು ಕೂಡ ನಡೆದವು.

ಕಾರ್ಯಕ್ರಮದಅಧ್ಯಕ್ಷತೆಯನ್ನು ವಿದ್ಯಾವರ್ಧಕ ಸಂಘದಅಧ್ಯಕ್ಷಗುಂಡಪ್ಪಗೌಡ ವಹಿಸಿದ್ದರು. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ವಿದ್ಯಾವರ್ಧಕ ಸಂಘದಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ.ಪಿ.ದೀಪು, ಕಾನೂನು ಅಧ್ಯಯನದ ನಿರ್ದೇಶಕ ಕೆ.ಬಿ.ವಾಸುದೇವಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular