ವಿನಯ್ ದೊಡ್ಡಕೊಪ್ಪಲು
ಹೊಸೂರು : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಹಿಡಿದು ಮೂರು ತಿಂಗಳು ಆಗುತ್ತಿರುವ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಗೆ ಸೇರುವ ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ನಿಗಮ ಮಂಡಳಿಯ ಮತ್ತು ಸ್ಥಳಿಯ ಸಂಸ್ಥೆಗಳ ನಾಮನಿರ್ದೇಶನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಲಾಭಿ ಆರಂಭಗೊಂಡಿದೆ.
ಕ್ಷೇತ್ರದಲ್ಲಿ 20 ವರ್ಷಗಳ ನಂತರ ಕಾಂಗ್ರೆಸ್ ಶಾಸಕರಾಗಿ ಡಿ.ರವಿಶಂಕರ್ ಆಯ್ಕೆಯಾದ ಬಳಿಕ ಬಹಳ ಉತ್ಸಕರಾಗಿರುವ ಕಾಂಗ್ರೆಸ್ ಕಾರ್ಯಕರ್ತರು ಇದೀಗ ನಿಗಮಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶಕರಾಗಲು ಭರ್ಜರಿ ತಯಾರಿ ನಡೆಸಿ ಇದನ್ನು ಪಡೆಯಲು ಪೈಪೋಟಿ ನಡೆಯಲು ಆರಂಭಿಸಿದ್ದಾರೆ.
ಈಗಾಗಲೇ ಕೆಪಿಸಿಸಿಯು ತನ್ನ ಕಾರ್ಯಕರ್ತರಿಗೆ ನಿಗಮ ಮಂಡಳಿ ಮತ್ತು ಸ್ಥಳಿಯ ಸಂಸ್ಥೆಗಳಿಗೆ ನಾಮ ನಿರ್ದೇಶನ ಮಾಡಲು ಅರ್ಜಿ ಕರೆದಿದ್ದು ಇಲ್ಲಿರುವ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ಮೂಲಕ 227 ಮಂದಿ ಅರ್ಜಿ ಸಲ್ಲಿಸಿ ಪಕ್ಷವು ನಮಗೆ ಈ ಸ್ಥಾನವನ್ನು ಕಲ್ಪಿಸಿ ಕೊಡಲಿದೆಯೇ ಎಂದು ಎದುರು ನೋಡುತ್ತಿದ್ದಾರೆ.
ಅರ್ಜಿ ಸಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರು ತಾಲೂಕಿನಲ್ಲಿ ಪಕ್ಷಕ್ಕಾಗಿ ತಾವು ಹಗಲು ರಾತ್ರಿ ಎನ್ನದೇ 20 ವರ್ಷದಿಂದ ಪಕ್ಷ ತಾಲೂಕಿನಲ್ಲಿ ಅಧಿಕಾರದಲ್ಲಿ ಇಲ್ಲದಿದ್ದರು ದುಡಿದಿದ್ದು ಈ ಬಾರಿ ನಮಗೆ ಈ ಸ್ಥಾನ ಮಾನವನ್ನು ಕಲ್ಪಿಸಿ ಕೊಡುವಂತೆ ದೊಡ್ಡ ಮಟ್ಟದಲ್ಲಿಯೇ ಲಾಭಿ ಆರಂಭಿಸಿದ್ದು ಇದಕ್ಕಾಗಿ ತಮಗೆ ಗೊತ್ತಿರುವ ಜಿಲ್ಲಾ ಮತ್ತು ರಾಜ್ಯ ಮಟ್ಟದ ಮುಖಂಡರ ಮೂಲಕ ಒತ್ತಡವನ್ನು ತರಲು ಆರಂಭಿಸಿದ್ದಾರೆ.
ಸದ್ಯ ಕೆ.ಆರ್.ನಗರ ಕ್ಷೇತ್ರದಲ್ಲಿ ಆಳೆದು ತೂಕ ಮಾಡಿದರು ನಿಗಮ ಮಂಡಳಿ ಮತ್ತು ಸ್ಥಳಿಯ ಸಂಸ್ಥೆಗಳಲ್ಲಿ 75 ಮಂದಿಗೆ ಅಷ್ಟೆ ನಾಮ ನಿರ್ದೇಶನ ಮಾಡುವ ಅವಕಾಶ ಇದ್ದು 200ಕ್ಕು ಹೆಚ್ಚು ಮಂದಿ ಅರ್ಜಿ ಸಲ್ಲಿಸಿರುವುದರಿಂದ ಯಾವ ಕಾರ್ಯಕರ್ತರು ಮತ್ತು ಮುಖಂಡರಿಗೆ ಈ ಸ್ಥಾನ ದೊರೆಯಲಿದೆ ಎಂಬುದು ಕೂತುಹಲ ಮೂಡಿಸಿದೆ.
ತಾಲೂಕು ಮಟ್ಟದಲ್ಲಿ ಸಿಗದೇ ಹೋದರೇ ಜಿಲ್ಲಾ ಮಟ್ಟದಲ್ಲಿ ನಾಮನಿರ್ದೇಶನ ಕೊಡಿಸಿ ಎಂದು ದುಂಬಾಲು ಬಿದ್ದಿರುವ ಇಲ್ಲಿನ ಕೆಲವು ಕಾರ್ಯಕರ್ತರ ಗುರುತಿಸಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಉಪಾಧ್ಯಕ್ಷರನ್ನಾಗಿ ಶಾಸಕ ಡಿ.ರವಿಶಂಕರ್ ಮತ್ತು ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ ಅವರು ನೇಮಕ ಮಾಡಿದ್ದಾರೆ. ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಜತಗೆ ಲೋಕಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟು ಕೊಂಡು ಇದೀಗ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಜಾತಿವಾರು ಮತ್ತು ಹೋಬಳಿವಾರು ಯಾರಿಗೆ ಈ ಸ್ಥಾನಮಾನವನ್ನು ಕೊಡಿಸಿದರೆ ಉತ್ತಮ ಎಂಬುವುದರ ಕುರಿತು ಲೆಕ್ಕಾಚಾರ ಹಾಕಿ ಅಂತಿಮ ಪಟ್ಟಿ ತಯಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿ ಯಾವುದಾರು ನಿಗಮ ಮಂಡಳಿ ಇಲ್ಲವೇ ಸ್ಥಳಿಯ ಸಂಸ್ಥೆಗಳಿಗೆ ನಾಮ ನಿರ್ದೇಶನವಾದರೇ ಮುಂದಿನ ದಿನದ ರಾಜಕೀಯದಲ್ಲಿ ತಮ್ಮ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರದಲ್ಲಿರುವ ಭತ್ತದ ಕಣಜದ ಕೈ ಕಾರ್ಯಕರ್ತರಲ್ಲಿ ಯಾರಿಗೆ ಶಾಸಕ ಡಿ.ರವಿಶಂಕರ್ ಅವರ ಕೃಪೆಯ “ಭಾಗ್ಯ” ಸಿಗಲಿದೆ ಎಂಬುವುದು ಕೂತುಹಲ ಮೂಡಿಸಿದೆ.
1. ಐಶ್ವರ್ಯ – ಬಾಬು ಹನುಮಾನ್ ಗೆ ಸಿಗುತ್ತಾ ಸ್ಥಾನಮಾನ
ನಿಗಮಂಡಳಿ ಮತ್ತು ಸ್ಥಳಿಯ ಸಂಸ್ಥೆಗಳಿಗೆ ನಾಮ ನಿರ್ದೇಶನ ಯಾವ ಕ್ಷಣದಲ್ಲಿ ಪಟ್ಟಿ ಹೊರಬೀಳುವ ಸಾಧ್ಯತೆಗಳಿರುವ ಬೆನ್ನಲ್ಲೆ ಎಐಸಿಸಿ ಕಿರಿಯ ವಕ್ತಾರೆ ಮತ್ತು ಮಾಜಿ ಶಾಸಕ ಮಂಚನಹಳ್ಳಿ ಮಹದೇವ್ ಪುತ್ರಿ ಐಶ್ವರ್ಯಮಹದೇವ್ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಸಾಲಿಗ್ರಾಮದ ಬಾಬುಹನುಮಾನ್ ಅವರಿಗೆ ರಾಜ್ಯ ಮಟ್ಟದ ನಿಗಮಂಡಳಿಯ ಸ್ಥಾನಮಾನ ಸಿಗ ಬಹುದು ಎಂದು ಅವರ ಬೆಂಬಲಿಗರು ಹೇಳುತ್ತಿದ್ದು ಅದರೆ ಶಾಸಕ ಡಿ.ರವಿಶಂಕರ್ ಅವರ ಶಿಪಾರಸ್ಸು ದೊರೆತರೆ ಮಾತ್ರ ಇವರಿಗೆ ಸ್ಥಾನ ಸಿಗಬಹುದು ಹೇಳಲಾಗುತ್ತಿದೆ
2. ಇರುವ ಸ್ಥಾನಮಾನಗಳು ಎಷ್ಟು ..?
ಸದ್ಯ ರಾಜ್ಯ ಮಟ್ಟದ ನಿಗಮಮಂಡಳಿಗೆ ಪತ್ರಿ ಕ್ಷೇತ್ರದಿಂದ 2, ಡಿಸಿಸಿ ಬ್ಯಾಂಕ್ ಗೆ 1,ಹಾಲು ಒಕ್ಕೂಟಕ್ಕೆ 1,ಜಿಲ್ಲಾ ಕೆಡಿಪಿಗೆ 5,ಜಿಲ್ಲಾ ಮಟ್ಟದ ಆಸ್ವತ್ರೆಗಳ ರಕ್ಷ ಸಮಿತಿ 6 ಮಂದಿ, ಜಿಲ್ಲಾ ಆಪ್ ಕಾಮ್ಸ್ ಗೆ 1, ಪುರಸಭೆಗೆ 5, ನಗರಾಭಿವೃದ್ದಿ ಪ್ರಾಧಿಕಾರ 6,ನಗರ ಯೋಜನಾ ಪ್ರಾಧಿಕಾರಕ್ಕೆ 4, ಪಟ್ಟಣ ಆಶ್ರಯ ಸಮಿತಿಗೆ 4, ಗ್ರಾಮಾಂತರ ಆಶ್ರಯ ಸಮಿತಿಗೆ 4,ಕ್ಷೇತ್ರ ಆರಾಧನ ಸಮಿತಿಗೆ 4,ತಾಲೂಕು ಭೂ ನ್ಯಾಯ ಮಂಡಳಿಗೆ 4, ತಾಲೂಕು ಅಕ್ರಮ-ಸಕ್ರಮ ಸಮಿತಿಗೆ 3, ತಾಲೂಕು ಕೆಡಿಪಿ ಸಮಿತಿಗೆ 6 ಎಪಿಎಂಸಿಗೆ 3, ಟಿಎಪಿಸಿಎಂಎಸ್ ಗೆ 3,ಪಿಎಲ್ ಡಿ ಬ್ಯಾಂಕ್ ಗೆ 1, ತಾಲೂಕು ಮಟ್ಟದ ಆಸ್ವತ್ರೆಗಳ ರಕ್ಷಾ ಸಮಿತಿಗೆ 6,ಪ್ರಾಥಮಿಕ ಆರೋಗ್ಯ ಕೇಂದ್ರದ ಸಲಹಾ ಸಮಿತಿಗೆ 6 ಮಂದಿ ಯನ್ನು ನೇಮಿಸುವ ಅವಕಾಶ ಇದೆ.
ಈಗಾಗಲೇ ನಿಗಮ ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೇಮಕ ಮಾಡುವಂತೆ ಸಲ್ಲಿಸಿರುವ ಅರ್ಜಿಗಳನ್ನು ಶಾಸಕ ಡಿ.ರವಿಶಂಕರ್, ಕೆಪಿಸಿಸಿ ಕಾರ್ಯಕಾರಣಿ ಸದಸ್ಯ ದೊಡ್ಡಸ್ವಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್ ಮತ್ತು ಎಂ.ಎಸ್.ಮಹದೇವ್ ಅವರುಗಳು ಪರಿಶೀಲನೆ ನಡೆಸಿ ಅಂತಿಮ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಅವರಿಗೆ ಕಳಿಸಿ ಕೊಡಲಾಗುವುದು ಅಂತಿಮವಾಗಿ ಯಾರಿಗೆ ಯಾವ ನಾಮ ನಿರ್ದೇಶನ ಎಂಬುವುದು ತಿಳಿಯಲಿದೆ
ಕಂಚಿನಕೆರೆ ಕೆ. ಪಿ. ಯೋಗೇಶ್
ಕೆಪಿಸಿಸಿ (ಒಬಿಸಿ )ರಾಜ್ಯ ಪ್ರಧಾನ ಕಾರ್ಯದರ್ಶಿ
ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಉಸ್ತುವಾರಿ
ಜಿಲ್ಲಾ ಕಾಂಗ್ರೆಸ್ ಸಮಿತಿ