Saturday, April 19, 2025
Google search engine

Homeರಾಜ್ಯಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ: ಡಾಕ್ಟರ್ ಗುರುಮಹಾಂತ ಸ್ವಾಮೀಜಿ

ಕಲಿಸಿದ ಗುರುಗಳಿಗೆ ಗುರುವಂದನಾ ಕಾರ್ಯಕ್ರಮದ ಮೂಲಕ ಸನ್ಮಾನಿಸುತ್ತಿರುವುದು ಶ್ಲಾಘನೀಯ ಕಾರ್ಯ: ಡಾಕ್ಟರ್ ಗುರುಮಹಾಂತ ಸ್ವಾಮೀಜಿ

ಬಾಗಲಕೋಟ:  ಇಳಕಲ್ ನಗರದ ಸರಕಾರಿ ಪದವಿ ಪೂರ್ವ ಕಾಲೇಜ್ ಇಳಕಲ್ ನ (ಜೂನಿಯರ್ ಪ್ರೌಢಶಾಲೆಯ)2007- 2008 ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಬಳಗದ ವತಿಯಿಂದ ಗುರುವಂದನಾ ಹಾಗೂ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಗುರುವಂದನ ಹಾಗೂ ವಿದ್ಯಾರ್ಥಿಗಳ ಸಮ್ಮೇಳನ ಸಮಾರಂಭವನ್ನು ಡಾ. ಗುರು ಮಹಾಂತ ಸ್ವಾಮೀಜಿಯವರು ವೇದಿಕೆಯ ಮೇಲಿದ್ದ  ಎಲ್ಲಾ ಗುರುಗಳು ಸಸಿಗೆ ನೀರರಿಯುವ ಮೂಲಕ ಉದ್ಘಾಟಿಸಿದರು.

ಅಲ್ಲದೆ ಸರಸ್ವತಿ ಮೂರ್ತಿಗೆ ಪುಷ್ಪ ಸಮರ್ಪಣೆ ಮಾಡುವ ಮೂಲಕ, ಮತ್ತು ಎಲ್ಲಾ ಗುರುಗಳು ಪೂಜ್ಯರು ತಮ್ಮ ಹಸ್ತಾಕ್ಷರವನ್ನು ಬರವಣಿಗೆಯ ಮೂಲಕ ಬರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಕಾರ್ಯಕ್ರಮದ ಕುರಿತು ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಯ ಮಾತುಗಳನ್ನಾಡಿದರು.  ಅಲ್ಲದೆ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿದ ರಾಮನಗೌಡ ಸಂಧಿಮನಿ ಗುರುಗಳು, 2007- 8ನೇ ಸಾಲಿನ ನಮ್ಮ ವಿದ್ಯಾರ್ಥಿಗಳು ಈ ಗುರುವಂದನ ಕಾರ್ಯಕ್ರಮದ ಮೂಲಕ ನಮ್ಮನ್ನು ಕರೆಸಿ ಸತ್ಕರಿಸಿದ್ದಕ್ಕೆ ತುಂಬಾ ಧನ್ಯವಾದಗಳು, ಅಲ್ಲದೆ  ಗುರುವಂದನಾ ಕಾರ್ಯಕ್ರಮ ಮಾಡುವುದರಲ್ಲದೆ ಬೋರ್ಡಿನ ಬಣ್ಣ, ಅಲ್ಲದೆ ಶೌಚಾಲಯ ವ್ಯವಸ್ಥೆ ಕಲ್ಪಿಸಿರುವುದು, ನಿಜಕ್ಕೂ ಒಳ್ಳೆಯ ಕಾರ್ಯ ಎಂದರು.

ಗುರುಗಳ ಸ್ಮರಣೆ ಮಾಡಿರುವ ನಿಮ್ಮ ಕಾರ್ಯ ನಿಜಕ್ಕೂ ಒಳ್ಳೆಯದು, ನಮ್ಮೆಲ್ಲ ಗುರುಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿದೆ ಎಂದರು.

ಕಾರ್ಯಕ್ರಮದಲ್ಲಿ ಪೂಜ್ಯರಿಗೆ  ವಿದ್ಯಾರ್ಥಿಗಳಿಂದ ಸತ್ಕರಿಸಲಾಯಿತು. ಅಲ್ಲದೆ ಕಲಿಸಿದ ಎಲ್ಲಾ ಗುರುಗಳಿಗೆ ಗುರು ಮಾತೆಯರಿಗೆ ಎಲ್ಲ ಗುರುಗಳು  ಸತ್ಕಾರ ಮಾಡಿದರು.

ಮುಖ್ಯ ಅತಿಥಿಗಳಾಗಿ ಬಾಲಕೃಷ್ಣ ಗಜೇಂದ್ರಗಡ, ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಲಿಸಿದ ಎಲ್ಲ ಗುರುಗಳು ಹಾಗೂ 2007 8ನೇ ಸಾಲಿನ ವಿದ್ಯಾರ್ಥಿ ಬಳಗದವರು  ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular