Saturday, April 19, 2025
Google search engine

Homeರಾಜ್ಯಸುದ್ದಿಜಾಲಮೈಸೂರು ದಸರಾ 2023: ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜನೆ

ಮೈಸೂರು ದಸರಾ 2023: ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆ ಆಯೋಜನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಅಂಗವಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ  ಬ್ರ್ಯಾಂಡಿಂಗ್ ಮೈಸೂರು ಸ್ಪರ್ಧೆಯನ್ನ ಆಯೋಜನೆ ಮಾಡಲಾಗಿದೆ.

ಆಕರ್ಷಕ ಲೋಗೋ ಹಾಗೂ ಒಂದು ಸಾಲುನುಡಿ, ಒಂದು ಸುಂದರ ಶುಭ ಸಂದೇಶ, ವಿಭಿನ್ನವಾದ ಸ್ಮರಣಿಕೆಗಳು, ಮೈಸೂರಿನ ನೆಚ್ಚಿನ ಜಾಗ/ಚಟುವಟಿಕೆಗಯನ್ನು ವಿವರಿಸುವ ಒಂದು ಮಿಂಬರಹ(Blog)  ಬರಹ ಸ್ಪರ್ಧೆಯ ವಿಷಯವಾಗಿದೆ.

ನೋಂದಣಿ ಮಾಡಿಕೊಳ್ಳಲು competitions@karnatakatourism.org ಗೆ ಕಳುಹಿಸಬೇಕು. ವಿನ್ಯಾಸದ ಬಗ್ಗೆ 200 ವಾಕ್ಯಗಳಲ್ಲಿ ವಿವರಿಸಿ. ಸಲ್ಲಿಕೆಗಳನ್ನು QR ಕೋಡ್ ನಲ್ಲಿ ವಿವರಿಸಿದಂತಹ ಶೈಲಿಯಲ್ಲಿ ಕಳುಹಿಸಬೇಕಾಗಿದೆ.

ಈ ಕುರಿತು ಸಚಿವರು, ಶಾಸಕರು,ವಿಧಾನಪರಿಷತ್ ಸದಸ್ಯರು ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿದರು.

ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಬಹುಮಾನ ನೀಡಲಾಗುತ್ತದೆ.

ವಿಜೇತರಿಗೆ ಬಹುಮಾನ ಪ್ರವಾಸೋದ್ಯಮ ಇಲಾಖೆ ಬಹುಮಾನ ನೀಡಲಿದ್ದು, ಮೊದಲ ಬಹುಮಾನ 30 ಸಾವಿರ, ದ್ವಿತೀಯ ಬಹುಮಾನ 10 ಸಾವಿರ, ತೃತೀಯ ಬಹುಮಾನ 05 ಸಾವಿರ  ನಗದು ಬಹುಮಾನ ನೀಡಲಾಗುತ್ತದೆ.

ನೋಂದಣಿಗೆ ಕೊನೆ ದಿನಾಂಕ ಆಗಸ್ಟ್ 31 ಕೊನೆಯ ದಿನವಾಗಿದ್ದು, ಅರ್ಜಿ ಸಲ್ಲಿಸಲು ಸೆಪ್ಟಂಬರ್ 4 ಕೊನೆಯದಿನವಾಗಿದೆ.

ಇದೇ ಸಂದರ್ಭದಲ್ಲಿ ಸಚಿವರು, ಶಾಸಕರು, ವಿಧಾನಪರಿಷತ್ ಸದಸ್ಯರು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular