ಹನೂರು : ವೈಶಂಪಾಳ್ಯ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಜಿಲ್ಲೆಯಲ್ಲಿಯೇ ಅತ್ಯುತ್ತಮ ಸಂಘವಾಗಿದ್ದು ಇತರೆ ಸಂಘಗಳಿಗೆ ಮಾದರಿ ಸಂಘವಾಗಿದೆ ಎಂದು ಚಾಮುಲ್ ನಿರ್ದೇಶಕ ಷಾಹುಲ್ ಅಹಮದ್ ತಿಳಿಸಿದರು.
ಹನೂರು ಸಮೀಪದ ವೈಶಂಪಾಳ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಚಾಮರಾಜನಗರ ಹಾಲು ಒಕ್ಕೂಟಕ್ಕೆ ವೈಶಂಪಾಳ್ಯ ಸಂಘದಿಂದ ಹಲವು ವರ್ಷಗಳಿಂದ ಒಂದೇ ಗುಣಮಟ್ಟದ ಹಾಲು ಸಂಗ್ರಹಿಸಿ ನೀಡುತ್ತಿರುವುದು ಸಂಘದ ಹಿರಿಮೆಯಾಗಿದೆ. ಅಲ್ಲದೆ ಇಲ್ಲಿನ ಹಾಲು ಉತ್ಪಾದಕರ ಸಂಘದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಮುಖ್ಯಕಾರ್ಯನಿರ್ವಾಹಕ ಸೇರಿ ಇಲ್ಲಿನ ಸಿಬ್ಬಂದಿಗಳು ನಿಸ್ವಾರ್ಥ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವುದು ಸಂಘದ ಪ್ರಗತಿಗೆ ಹಿಡಿದ ಕೈಗನ್ನಡಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಲ್ಲದೆ ರೈತರು ಪಶು ಪೋಷಣೆಯಲ್ಲಿ ವೈಜ್ಞಾನಿಕ ಪದ್ಧತಿಯನ್ನು ಆಳವಡಿಸಿಕೂಳ್ಳುವುದರ ಜೊತೆಗೆ ಪ್ರಸ್ತುತ ದಿನದಲ್ಲಿ ರಾಸುಗಳ ಆರೋಗ್ಯ ಕಾಪಾಡಿಕೊಳ್ಳಲು ರೋಗ ಪ್ರತಿರೋಧಕ ಶಕ್ತಿ ವೃದ್ಧಿಗೆ ಅಗತ್ಯ ಪೋಷಾಕಾಂಶಗಳುಳ್ಳ ಆಹಾರ ನೀಡಬೇಕು ಎಂದು ಹಾಲು ಉತ್ಪಾದಕರಿಗೆ ತಿಳಿಸಿದರು.
ಬಳಿಕ ಚಾಮುಲ್ ನಿರ್ದೇಶಕ ಮಹದೇವಸ್ವಾಮಿ ಮಾತನಾಡಿ ರೈತರು ಸರ್ಕಾರದಿಂದ ಬರುವ ವಿವಿಧ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಮತ್ತು ಈ ಸಂಘಕ್ಕೆ ಉತ್ಪಾದಕರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಿದಾಗ ಇನ್ನೂ ಉನ್ನತ ಮಟ್ಟಕ್ಕೆ ಪ್ರಗತಿಯಾಗಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ವಿಸ್ತರಣಾಧಿಕಾರಿ ವೆಂಕಟೇಶ್ ಲೆಕ್ಕ ವಹಿವಾಟನ್ನು ಮಂಡಿಸಿ ಈ ವರ್ಷ ನಿವ್ವಳ ಲಾಭ 89,208ರೂಗಳು ಲಭಿಸಿದೆ ಎಂದು ಪ್ರಕಟಿಸಿ ಅತಿ ಹೆಚ್ಚು ಆಗುವ ಗುಣಮಟ್ಟದ ಹಾಲನ್ನ ನೀಡಿದಂತಹ ಜಾನುವಾರುಗಳ ಪಾಲಕರಿಗೆ ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಈ ವೇಳೆ ಅದ್ಯಕ್ಷರಾದ ಸರಸ್ವತಿ, ಉಪಾದ್ಯಕ್ಷರಾದ ಮೆಹರ್ ಜಾನ್, ಮುಖ್ಯಕಾರ್ಯನಿರ್ವಾಹಕರಾದ ರಾಜಾಮಣಿ,ಹಾಗೂ ಹಾಲು ಪರಿವಿಕ್ಷಕರಾದ ಸೇಲ್ವಮ್ , ರೈತರಾದ ಶಿವು ಹಾಗೂ ಇನ್ನಿತರರು ಹಾಜರಿದ್ದರು.