ಮಂಡ್ಯ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನದಿಂದ ಭ್ರಷ್ಟಾಚಾರ ಕಾಣ್ತಾ ಇದೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಮತ್ತು ಡಿಕೆಶಿಯನ್ನ ಮಂತ್ರಿಮಂಡಲದಿಂದ ವಜಾ ಮಾಡಿ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಡಾಕ್ಟರ್ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಎಲ್ಲಿ ನೋಡಿದ್ರು ಭ್ರಷ್ಟಾಚಾರದ ಆರೋಪ ಪ್ರತಿ ಸಚಿವರ ಮೇಲಿದೆ . ಭ್ರಷ್ಟಾಚಾರದಲ್ಲೆ ತೊಡಗಿರುವ ಪಕ್ಷ ಕಾಂಗ್ರೆಸ್ ಪಕ್ಷ, ಜನರ ಕಷ್ಟ ಅರ್ಥಮಾಡಿಕೊಳ್ಳದೆ ಜನರ ರಕ್ತ ಹೀರುತ್ತಿದ್ದಾರೆ . ಮಂಡ್ಯ ಜಿಲ್ಲೆಯಲ್ಲಿ ಪೇಸಿಎಸ್ ಅಭಿಯಾನವನ್ನ ಮಾಡಿದ್ದಾರೆ.ಬಿಜೆಪಿ ಕಾರ್ಯಕರ್ತರು ಹೋರಾಟ ಮಾಡ್ತಿದ್ದಾರೆ.ಕೃಷಿ ಸಚಿವ ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಬಯಲಿಗೆಳೆಯುವ ಕೆಲಸವನ್ನು ಬಿಜೆಪಿ ಮಾಡ್ತಿದೆ.ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಕಾಲದಿಂದಲೂ ರೈತ ವಿರೋಧಿಯಾಗಿದೆ. ಹಲವು ಯೋಜನೆಗಳನ್ನ ವಾಪಸ್ ಪಡೆದಿದ್ದಾರೆ.50% ಬಜೆಟ್ ನಲ್ಲಿ ರೈತರ ಕಡಿತ ಮಾಡಿದೆ ಎಂದರು.
ಸಿದ್ದರಾಮಯ್ಯ ಯಾವಗಲೂ ರೈತ ವಿರೋಧಿ:
ಸಿದ್ದರಾಮಯ್ಯ ಬಂದ ಕಾಲದಿಂದಲೂ ರೈತರಿಗೆ ತೊಂದರೆ ಹಾಗ್ತಿದೆ.ಇವರ ಕಾಲದಲ್ಲಿ ಕೊಲೆ, ಸುಲಿಗೆ ದರೋಡೆ ಹಾಗ್ತಿದೆ. ಚಲುವರಾಯಸ್ವಾಮಿ ಅವರು ಸಂಪೂರ್ಣವಾಗಿ ಭ್ರಷ್ಟಾಚಾರ ಮಾಡ್ತಿದ್ದಾರೆ.
ಚಲುವರಾಯಸ್ವಾಮಿ ಅವರನ್ನ ಮಂತ್ರಿ ಮಂಡಲದಿಂದ ವಜಾ ಮಾಡಬೇಕು. 17 ರಂದು ರಾಜ್ಯಪಾಲರನ್ನ ಭೇಟಿ ಮಾಡ್ತೇವೆ. ಚಲುವರಾಯಸ್ವಾಮಿ ಅವರ ಮೇಲೆ ಲೋಕಾಯುಕ್ತ ತನಿಖೆಯಾಗಬೇಕು. ಮಂತ್ರಿ ಮಂಡಲದಿಂದ ಚಲುವರಾಯಸ್ವಾಮಿ ಅವರನ್ನು ವಜಾ ಮಾಡಿ,ಡಿಕೆ ಶಿವಕುಮಾರ್ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡಬೇಕು. ಇಬ್ಬರ ಮೇಲು ಲೋಕಾಯುಕ್ತ ತನಿಖೆಯಾಗಬೇಕು. ಡಿಕೆಶಿ ಹಿರಿಯರು ಬಹಳ ಅಸ್ವಸ್ಥರಾಗಿದ್ದಾರೆ ಅಜ್ಜಯ್ಯ ಮೇಲೆ ಪ್ರಮಾಣ ಮಾಡಿ ಅಂದ್ರೆ ಉಸಿರಾಟ ಕಮ್ಮಿಯಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕಮೇಲೆ ಅಪಾದನೆ ಮಾಡ್ತಿದ್ದಾರೆ. 15% ಹಣ ಬೇಡಿಕೆ ಇಟ್ಟಿದ್ದಾರೆ, ಅಜ್ಜಯ್ಯನ ಮೇಲೆ ಪ್ರಮಾಣ ಮಾಡಿ,
ಭಯಬೀತರಾಗಿ ದಿಕ್ಕೆಟ್ಟಿ ಆತಂಕದಲ್ಲಿ ಡಿಕೆಶಿ ಓಡಾಡ್ತಿದ್ದಾರೆ. ಡಿಕೆ ಶಿವಕುಮಾರ್ ಅವರ ಸವಾಲಿಗೆ ಉತ್ತರ ಇಲ್ಲ. ಶಿವಕುಮಾರ್ ಬಹಳ ಎಡವುತ್ತಿದ್ದಾರೆ. ಭ್ರಷ್ಟಾಚಾರ ಮಾಡ್ತೇನೆ ಅಂತ ಅನ್ಯಾಯ ಮಾಡ್ತಿದ್ದಾರೆ. ಬೇರೆ ಗುತ್ತಿಗೆದಾರರಿಗೆ ಅನಾನುಕೂಲ ಮಾಡ್ತಿದ್ದಾರೆ. ನಾವು ಸಹವಾಸ ಮಾಡಿಲ್ಲ.
ನೀವು ನಂಬುವಂತ ಅಜ್ಜಯ್ಯನ ಮೇಲೆ ಪ್ರಾಮಾಣ ಮಾಡಿ ಅಂತ ಒಬ್ಬ ಗುತ್ತಿದಾರ ಕೇಳಿದ್ದು:
ಪ್ರಾಮಾಣಿಕರಾದರೆ ಲೋಕಾಯುಕ್ತ ತನಿಖೆಗೆ ವಹಿಸಲಿ. ಯಾಕೆ ಎದರುತ್ತಿದ್ದಾರೆ, ಅಜ್ಜಯ್ಯನ ಮೇಲೆ ಪ್ರಮಾಣ ಮಾಡಲಿ. ಆ ಹುಡುಗನಿಗೆ ಡಿಕೆಶಿ ಬೆದರಿಕೆ ಹಾಕ್ತಿದ್ದಾರೆ. ಹೇಮಂತ್ ಅನ್ನುವ ಹುಡುಗನಿಗೆ ದಮ್ಕಿ ಹಾಕಿದ್ದಾರೆ. ಅನುಮಾನ ಇಲ್ಲ ಒತ್ತಡ ಹೇರಿದ್ದಾರೆ ಆ ಹುಡುಗನ ಮೇಲೆ. ಆ ಹುಡುಗ ಬದುಕಬೇಕು, ಬಿಲ್ ಬೇಕಾದರೆ ಈ ರೀತಿ ಮಾಡು ಅಂತ ಎದರಿಸಿದ್ದಾರೆ. ಭಯದ ವಾತಾವರಣ ಭ್ರಷ್ಟಾಚಾರ ತೊಡಗಿರುವುದು ಕಾಂಗ್ರೆಸ್ ಸರ್ಕಾರ. ನಾವು ಕೋರ್ಟ್ ಗೆ ಹೋದ್ವಿ ಮುನಿ ರತ್ನ ದಾಖಲೆ ಕೇಳಿದ್ರು ಇಲ್ಲ ಕೆಂಪಣ್ಣನ ಅರೆಸ್ಟ್ ಮಾಡಿದ್ರು. ಇಂದಿರಾಗಾಂಧಿ ರಾಜೀವ ಗಾಂಧಿ ಭ್ರಷ್ಟಾಚಾರ ಅಡಗಿದೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಒಪ್ಪಿಕೊಂಡಿತ್ತು. ಸಿದ್ದರಾಮಯ್ಯ ನಾಯಕತ್ವದ ಸರ್ಕಾರ ಭ್ರಷ್ಟಾಚಾರದ ಸರ್ಕಾರ. ಅಭಿವೃದ್ಧಿ ಮಾಡ್ತಿಲ್ಲ, ಗುಣಮಟ್ಟದ ಶಿಕ್ಷಣ ಕೊಡ್ತಿಲ್ಲ.
ಕಾಂಗ್ರೆಸ್ ಸರ್ಕಾರದ ಅವನತಿಯ ದಾರಿಗೆ ಬಂದಿದೆ:
ಕಾಡಿಬೇಡಿ ಬಂದಂತಹ ಸರ್ಕಾರ, ಲೋಕಸಭಾ ಚುನಾವಣೆಗೆ ಮತ್ತೊಮ್ಮೆ ಪರಿಸ್ಥಿತಿ ಅದೆಗೆಟ್ಟಿದೆ. ಎಲ್ಲರನ್ನೂ ಬೇಡ್ತಿದ್ದಾರೆ ನಮ ಜೊತೆ ಬನ್ನಿ ಅಂತ.ಮಹಾಘಟ್ ಬಂಧನ್ ಮಾಡಿ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡರು. ಅಧಿಕಾರ ದುರ್ಬಳಕೆ ಮಾಡ್ತಿದ್ದಾರೆ, ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ದುಸ್ತಿತ್ತಿಯಲ್ಲಿದೆ. ಯಾವುದೇ ಕಾರಣದಲ್ಲೂ ಅಧಿಕಾರಕ್ಕೆ ಬರಲ್ಲ. ಇವರ ಮಹಾ ಘಟ್ಬಂದನ್ ಅಧಿಕಾರಕ್ಕೆ ಬರಲ್ಲ. ಹಗಲು ಕನಸಲ್ಲಿ ಪ್ರಯತ್ನ ಮಾಡ್ತಿದ್ದಾರೆ.ರಾಹುಲ್ ಗಾಂಧಿಗೆ ಒಟ್ ಹಾಕ್ತಾರ? ನರೇಂದ್ರ ಮೋದಿ ಒಟ್ ಹಾಕ್ತಾರೆ. ಇವರು ಏನು ಸಾಧನೆ ಮಾಡ್ತಿದ್ದಾರೆ? ಬಿಜೆಪಿ ಪರ ಜನ 28 ಕ್ಷೇತ್ರದಲ್ಲಿ ಗೆಲ್ತಾರೆ. ಕಾಂಗ್ರೆಸ್ ನಲ್ಲೆ ಹೊಡೆದಾಟ ನಡೆಯುತ್ತಿದೆ. ಅವರ ಪಕ್ಷದ ಸಚಿವರೇ ಪತನದ ಬಗ್ಗೆ ಹೇಳ್ತಿದ್ದಾರೆ. ನಾವು ನೋಡ್ತಾ ಕುಳಿತರೆ ಸಾಕು ಕಾಂಗ್ರೆಸ್ ಪಕ್ಷ ಪತನವಾಗುತ್ತೆ. ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಅಶ್ವಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.