Saturday, April 19, 2025
Google search engine

Homeರಾಜ್ಯಸುದ್ದಿಜಾಲಆ.19 ರಂದು ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ

ಆ.19 ರಂದು ಮಾನವ ಸರಪಳಿ ನಿರ್ಮಿಸಿ ಬೃಹತ್ ಪ್ರತಿಭಟನೆ

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಮತ್ತು ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಆ.19 ರಂದು ಬೃಹತ್ ಪ್ರತಿಭಟನೆ.

ಪಿರಿಯಾಪಟ್ಟಣ: ಸೌಜನ್ಯ ಕೊಲೆ ಪ್ರಕರಣ ಮರು ತನಿಖೆಗೆ ಒತ್ತಾಯಿಸಿ ಮತ್ತು ಮಣಿಪುರದಲ್ಲಿ ನಡೆದ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಆ.19 ರಂದು ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು.
ಪಟ್ಟಣದ ಕನಕ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮುದಾಯ ಮುಖಂಡರು ಒಮ್ಮತದ ತೀರ್ಮಾನ ಕೈಗೊಂಡು ಅಂದು ಬೆಳಿಗ್ಗೆ 10:30 ಕ್ಕೆ ಪೊಲೀಸ್ ಠಾಣಾ ಆವರಣದಿಂದ ಮೆರವಣಿಗೆ ಮೂಲಕ ಬೆಟ್ಟದಪುರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನಂತರ ತಾಲ್ಲೂಕು ಆಡಳಿತ ಭವನಕ್ಕೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.
ಈ ಸಂದರ್ಭ ತಾಲೂಕು ಕುರುಬ ಸಂಘದ ಅಧ್ಯಕ್ಷ ಎಚ್.ಡಿ ಗಣೇಶ್, ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡ ಟಿ.ಈರಯ್ಯ, ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಗೌರವಾಧ್ಯಕ್ಷ ಡಿ.ಎ ಜವರಪ್ಪ, ಮೋಹನ್, ಸೀಗೂರು ವಿಜಯ್ ಕುಮಾರ್, ಎಚ್.ಡಿ ರಮೇಶ್, ಎಂ.ಮಾದೇಶ್ ಕುಮಾರ್, ಪಿ.ಮಹದೇವ್, ಜಂಮೃದ್ ಪಾಷ, ಅಬ್ದುಲ್ ವಾಜಿದ್, ಅಜೀಜ್, ಪಿ.ಟಿ ನಾರಾಯಣ, ಪಿ.ಪಿ ಮಹದೇವ್, ಲೋಹಿತ್, ಪುಟ್ಟನಾಯಕ, ರವಿ, ಜಯಶಂಕರ, ಶಂಕರ, ಕೆ.ಬಿ ಮೂರ್ತಿ, ಎ.ಕೆ ಗೌಡ, ಮಹದೇವ್ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.

RELATED ARTICLES
- Advertisment -
Google search engine

Most Popular