ಬಾಗಲಕೋಟೆ: ಬೈಕ್ ಸಾಹಸ ಕ್ರೀಡೆಯ ಮೂಲಕ ಹ್ಯಾಂಡಲ್ ಇಲ್ಲದೆ ಬೈಕ್ ಓಡಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ ರಾಜ್ಯ ಹಾಗೂ ರಾಷ್ಟ್ರದ ಪ್ರಥಮ ಸಾಧಕ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ಈರಣ್ಣ ಕುಂದರಗಿಮಠ.
ಅವರು ಸ್ವಾತಂತ್ರ್ಯೋತ್ಸವದ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 50 ರ ಹುನಗುಂದದಿಂದ ಇಳಕಲ್ ನಗರದ ವರೆಗೆ ಕೈಯಲ್ಲಿ ರಾಷ್ಟ್ರಧ್ವಜ ಹಾಗೂ ಬೈಕಿಗೆ ಕನ್ನಡ ಧ್ವಜವನ್ನು ಕಟ್ಟಿ, ರಾಷ್ಟ್ರ ಪ್ರೇಮವನ್ನು ಮೆರೆದರು.
ಈಗಾಗಲೇ ದೇಶದಲ್ಲಿಯೇ ಪ್ರಥಮ ಬಾರಿಗೆ ಬಾಗಲಕೋಟೆ ಜಿಲ್ಲಾ ಭವನ ದಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಹ್ಯಾಂಡಲ್ ಇಲ್ಲದ ಬೈಕ್ ಓಡಿಸಿ, ಹಾಗೂ ಎರಡು ಕೈ, ಕಾಲುಗಳನ್ನು ಹಗ್ಗದಿಂದ ಕಟ್ಟಿಕೊಂಡು ಕಾರು ಚಲಾಯಿಸಿದರು.
ಸುಮಾರು 1341 ಕಿ. ಮೀ. ಗಳನ್ನು 47ಗಂಟೆ 55 ನಿಮಿಷಗಳಲ್ಲಿ ಕ್ರಮಿಸಿ ಬೆಂಗಳೂರು ತಲುಪಿ ಐತಿಹಾಸಿಕ ರಾಷ್ಟ್ರ ಮಟ್ಟದ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಇಂದಿನ ಇವರ ಈ ಬೈಕ್ ಸಾಹಸಕ್ಕೆ ಜಿಲ್ಲೆಯ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.