Sunday, April 20, 2025
Google search engine

Homeರಾಜ್ಯಸಂವಿಧಾನದ ಉದ್ದೇಶಗಳನ್ನು ಜಾರಿಗೆ ತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮುಖ್ಯವಾದುದು: ಕೆ.ಎಂ.ಉದಯ್

ಸಂವಿಧಾನದ ಉದ್ದೇಶಗಳನ್ನು ಜಾರಿಗೆ ತರುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮುಖ್ಯವಾದುದು: ಕೆ.ಎಂ.ಉದಯ್

ಮಂಡ್ಯ: ಗಾಂಧೀ ಕನಸಿನ ಗ್ರಾಮ ಸ್ವರಾಜ್ಯ ಹಾಗೂ ಅಂಬೇಡ್ಕರ್ ಸಂಕಲ್ಪದ ಸಂವಿಧಾನದ ಉದ್ದೇಶಗಳನ್ನ ಜಾರಿಗೆ ತರುವಲ್ಲಿ ಶಿಕ್ಷಣ ಸಂಸ್ಥೆಗಳ ಮತ್ತು ವಿದ್ಯಾರ್ಥಿಗಳ ಪಾತ್ರ ಮುಖ್ಯವಾದುದು ಎಂದು ಶಾಸಕ ಕೆ.ಎಂ.ಉದಯ್ ಹೇಳಿದರು.

ಶಿವಪುರದ ಧ್ವಜ ಸತ್ಯಾಗ್ರಹಸೌಧದಲ್ಲಿ ಎಚ್.ಕೆ.ವೀರಣ್ಣಗೌಡ ಕಾಲೇಜು, ತಾಲ್ಲೂಕು ಆಡಳಿತ ಹಾಗೂ ಮಂಡ್ಯ ಪಿಡಿಎಫ್ ಲಯನ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೆರಿಸಿ ಅವರು ಮಾತನಾಡಿದರು.

ಬ್ರಿಟಿಷರ ದಾಸ್ಯದಿಂದ ಭಾರತವನ್ನ ಸ್ವಾತಂತ್ರ್ಯಗೊಳಿಸುವಲ್ಲಿ ಗಾಂಧೀಜಿ ಸೇರಿದಂತೆ ಹಲವಾರು ಮಹಾನ್ ನಾಯಕರ ಅಹಿಂಸತ್ಮಾಕ ಹೋರಾಟ ಕಾರಣವಾಗಿದ್ದು, ಇಂತಹ ಮಹಾನ್ ನಾಯಕರುಗಳ ಜೀವನ ಚರಿತ್ರೆಯನ್ನು ವಿದ್ಯಾರ್ಥಿಗಳು ಓದುವ ಮುಖಾಂತರ ದೇಶಾಭಿಮಾನಿಗಳಾಗಿ ರೂಪುಗೊಳ್ಳಬೇಕೆಂದು ಅವರು ಹೇಳಿದರು.

ಗಾಂಧೀಜಿಯವರ ಅಹಿಂಸ ಹೋರಾಟವು ವಿಶ್ವದ ಹೋರಾಟಗಳಿಗೆ ಮಾದರಿಯಾಗಿದ್ದು ಅವರ ಗ್ರಾಮ ಸ್ವರಾಜ್ಯ ಸಹಕಾರಗೊಳ್ಳಬೇಕಾದರೆ ಯುವಜನತೆ ಭಾರತೀಯ ಸಂವಿಧಾನ ಸಂಸ್ಕೃತಿಯ ಬಗ್ಗೆ ಅರಿವು ಮೂಢಿಸಿಕೊಂಡು ಶಾಂತಿಪ್ರಿಯ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರು ಕೈಜೊಡಿಸಿದಾಗ ಗಾಂಧೀಜಿಯವರ ಮುಖ್ಯಧೈಯ ಕಾರ್ಯರೂಪಕ್ಕೆ ಬರಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಈ ವೇಳೆ ಹಿರಿಯ ಸ್ವಾತಂತ್ರ್ಯ ಹೋರಟಗಾರ ಕೆ.ಟಿ.ಚಂದು, ತಹಶೀಲ್ದಾರು ಟಿ.ಎನ್.ನರಸಿಂಹಮೂರ್ತಿ, ಎಂ.ಹೆಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಅಧ್ಯಕ್ಷ ಎಂ ಸ್ವರೂಪ್‌ಚಂದ್, ಕಾರ್ಯದರ್ಶಿ ಸಿ.ಅಪೂರ್ವಚಂದ್ರ, ಖಜಾಂಚಿ ಜಿ.ಎಸ್.ಶಿವರಾಮು, ನಿರ್ದೇಶಕರಾದ ಎಂ. ಎ. ರಾಮಲಿಂಗಯ್ಯ, ಮಂಡ್ಯ ಪಿಡಿಎಫ್ ಲಯನ್ಸ್ ಸಂಸ್ಧೆಯ ಅಧ್ಯಕ್ಷ ಸಿ ಅನಂತ್‌ಕುಮಾರ್, ಪುರಸಭಾ ಸದಸ್ಯರಾದ ಸರ್ವಮಂಗಳ, ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ಉಪಪ್ರಾಂಶುಪಾಲರಾದ ಜಿ.ಎಸ್.ನಂದಿನಿ, ಮುಖ್ಯ ಶಿಕ್ಷಕರಾದ ಎನ್.ಕೃಷ್ಣ, ಹೆಚ್.ಪಿ.ಮಹೇಶ್, ಎಂ.ಟಿ.ಚಂದ್ರಶೇಖರ್, ಕೆ.ಎಂ.ವರದರಾಜು, ಆಡಳಿತಾಧಿಕಾರಿ ಯು.ಎಸ್.ರವಿ. ಹಾಗೂ ರಾ.ಸೇಯೋ ಅಧಿಕಾರಿಗಳಾದ ಹೆಚ್.ಎಸ್.ಪಂಚಲಿಂಗೇಗೌಡ, ಎ.ವಿ.ಪ್ರದೀಪ್ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular