Sunday, April 20, 2025
Google search engine

Homeರಾಜ್ಯಸುದ್ದಿಜಾಲಮೈಸೂರಿನಲ್ಲಿ ಹೆಚ್ಚಾದ ಬಿಸಿಲಿನ ತಾಪ: ಭಾಷಣ ಓದಿ ಸುಸ್ತಾದ ಸಚಿವ ಹೆಚ್.ಸಿ.ಮಹದೇವಪ್ಪ

ಮೈಸೂರಿನಲ್ಲಿ ಹೆಚ್ಚಾದ ಬಿಸಿಲಿನ ತಾಪ: ಭಾಷಣ ಓದಿ ಸುಸ್ತಾದ ಸಚಿವ ಹೆಚ್.ಸಿ.ಮಹದೇವಪ್ಪ

ಮೈಸೂರು: ದೇಶದ 77ನೇ ಸ್ವಾತಂತ್ರ್ಯೋತ್ಸವವನ್ನು ಮೈಸೂರಿನಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಅದರ ಜೊತೆ ಬಿಸಿಲಿನ ಝಳವು ಸ್ವಲ್ಪ ಹೆಚ್ಚಾಗಿಯೇ ಇದೆ.

ಇಂದು ಮೈಸೂರಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯ ಸಮಾರಂಭ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು,  ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹದೇವಪ್ಪ ಅವರು ಭಾಷಣ ವೇಳೆ ಸುಸ್ತಾಗಿದ್ದಾರೆ.

ಬಿಸಿಲಿನ ಜಳಕ್ಕೆ ತಲೆಸುತ್ತಿದ ಪರಿಣಾಮ ಸಚಿವರು ಭಾಷಣವನ್ನು ಅರ್ಧಕ್ಕೆ ಧ್ವಜಸ್ತಂಭದ ಬಳಿಯೇ ಕುರ್ಚಿಯಲ್ಲಿ ಕುಳಿತರು.  ನೀರು ಕುಡಿದು ಸುಧಾರಿಸಿಕೊಂಡರು. ನಂತರ ಮತ್ತೆ ಕಾರ್ಯಕ್ರಮದಲ್ಲಿ ಭಾಗಿಯಾದರು.

RELATED ARTICLES
- Advertisment -
Google search engine

Most Popular