ಗದಗ: ಕೇದಾರನಾಥದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮಾಡುತ್ತೇವೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಎಚ್ ಕೆ ಪಾಟೀಲ್ ತಿಳಿಸಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ಕೇದಾರದಲ್ಲಿ ಸಿಲುಕಿರುವ ಕನ್ನಡಿಗರ ಸಹಾಯ ಬೇಕು ಮಾಡುತ್ತೇವೆ. ಕಳೆದ ಬಾರಿ ಅಮರನಾಥದಲ್ಲಿ ಸಿಲುಕಿದ್ದರ ರಕ್ಷಣೆ ಮಾಡಲಾಯಿತು. ಅದೇ ರೀತಿಯಲ್ಲಿ ಕೇದಾರ ಸಿಲುಕಿದ್ದವರ ರಕ್ಷಣೆ ಮಾಡುತ್ತೇವೆ ಎಂದರು.
ರಾಜ್ಯ ಸರ್ಕಾರ ದೆಹಲಿಯಲ್ಲಿರುವ ಕರ್ನಾಟಕ ಭವನ ಉಪಯೋಗ ಮಾಡಿಕೊಂಡು, ಕೇದಾರನಾಥ ಸಿಲುಕಿದ್ದರ ರಕ್ಷಣೆ ಮಾಡಲಿದೆ ಎಂದರು.