Saturday, April 19, 2025
Google search engine

Homeರಾಜ್ಯದನಗಳ ತೊಳೆಯಲು ಹೋದ ಇಬ್ಬರು ಬಾಲಕರು ನೀರು ಪಾಲು: ಮಹಿಳೆ, ಓರ್ವ ಬಾಲಕನ ರಕ್ಷಣೆ

ದನಗಳ ತೊಳೆಯಲು ಹೋದ ಇಬ್ಬರು ಬಾಲಕರು ನೀರು ಪಾಲು: ಮಹಿಳೆ, ಓರ್ವ ಬಾಲಕನ ರಕ್ಷಣೆ

ಗದಗ: ದನಗಳ ತೊಳೆಯಲು ಹೋದ ಇಬ್ಬರು ಬಾಲಕರು ನೀರು ಪಾಲಾಗಿದ್ದು, ಇಬ್ಬರು ಬಚಾವ್ ಆಗಿರುವ ಘಟನೆ ಗದಗ ಹೊರವಲಯದ ರಹೀಮತ್ ನಗರದಲ್ಲಿ ನಡೆದಿದೆ.

ಮಹಮ್ಮದ್ ಅಮನ್ ಹುಬ್ಬಳ್ಳಿ, (12), ಹಾಗೂ ಸಂತೋಷ ಕುಂಬಾರ್ ನೀರು (14) ನೀರು ಪಾಲಾದ ದುರ್ದೈವಿಗಳು.

ಮಹಮ್ಮದ್ ಆದಿಲ್ ಹುಬ್ಬಳ್ಳಿ(14), ಮಹಿಳೆ ಶಾಹೀನ್ ಹುಬ್ಬಳ್ಳಿ (30) ಬಚಾವ್ ಆಗಿದ್ದಾರೆ.

ಮಹಿಳೆ ಸೇರಿದಂತೆ ಮೂವರು ಬಾಲಕರು ನೀರಿನಲ್ಲಿ ಮುಳುಗಿದ್ದಾರೆ. ಈ ವೇಳೆ ಹೊಂಡದ ಪಕ್ಕ ಹೋಗುತ್ತಿದ್ದ ರಾಜ್ ಸಿಂಗ್ ನಾಲ್ಕು ಜನ ನೀರು ಪಾಲಾಗಿದ್ದು,  ಅವರನ್ನು ರಕ್ಷಿಸಲು ಮುಂದಾಗಿದ್ದಾನೆ. ಮಹಿಳೆ ಹಾಗೂ ಓರ್ವ ಯುವಕನನ್ನು ರಕ್ಷಿಸಿದ್ದಾನೆ. ಆದರೆ ಇಬ್ಬರು ಯುವಕರು ನೀರುಪಾಲಾಗಿದ್ದಾರೆ.

ನೀರು ಪಾಲಾದ ಇಬ್ಬರು ಬಾಲಕರಿಗಾಗಿ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಗದಗ ಶಹರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular