ಹನೂರು:ಅನೇಕ ಮಹನೀಯರ ತ್ಯಾಗ ಬಲಿದಾನದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯವನ್ನು ಪಡೆಯಲು ಸಾಧ್ಯವಾಗಿದೆ. ಇಂತಹ ಶುಭ ಗಳಿಗೆಯಲ್ಲಿ ದೇಶಕ್ಕಾಗಿ ಹೋರಾಟ ಮಾಡಿದವರನ್ನು ಸ್ಮರಿಸುವ ಮೂಲಕ ನಾವೆ ಲ್ಲರು ಗೌರವ ಸೂಚಿಸೋಣ ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಮಲೆಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹನೂರು ತಾಲೂಕು ವತಿಯಿಂದ ಆಯೋಜಿಸಲಾ ಗಿದ್ದ 77ನೇ ಸ್ವಾತಂತ್ರ ದಿನಾಚರಣೆ ಸಮಾರಂಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಈ ನೆಲವನ್ನು ಅನೇಕ ಕಾಲ ವಶಕ್ಕೆ ಪಡೆದರು. ಇವರ ಸಂಕೋಲದಿಂದ ಮುಕ್ತಿ ಕಾಣಲು ಹಲವು ಸ್ವಾತಂತ್ರ್ಯ ಪಡೆಯಲು ವೀರ ಮರಣವನ್ನಪ್ಪಿದರು. ಸ್ವಾತಂತ್ರ್ಯ ಬಳಿಕ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಅತ್ಯದ್ಭುತ ಸಂವಿಧಾನದಿಂದ ಸರ್ವರು ಸಮಾನತೆಯಿಂದ ಬದುಕುವ ಅವಕಾಶ ಕಲ್ಪಿಸಲಾಯಿತು. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಪ್ರಗತಿಯತ್ತ ಕೊಂಡೊಯ್ದಿದೆ.
ಇತರೆ ಮುಂಚೋಣಿ ರಾಷ್ಟ್ರಗಳಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದೆ. ಹನೂರು ಕ್ಷೇತ್ರ ಭೌಗೊಳಿಕವಾಗಿ ಬಹು ವಿಸ್ತೀರ್ಣ ಹೊಂದಿದ ಕ್ಷೇತ್ರವಾಗಿದ್ದು ಶೈಕ್ಷಣಿಕವಾಗಿ, ಆರ್ಥಿಕವಾಗಿ ಸದೃಢವಾಗಿಸುವ ನಿಟ್ಟಿನಲ್ಲಿ ಮುಂದಾಗಬೇಕಿದೆ. ಈ ಬಗ್ಗೆ ಅನೇಕ ಗುರಿ ಉದ್ದೇಶಗಳನ್ನು ಹೊಂದಿದ್ದೇನೆ ಎಂದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಝಲಕ್ :
ಪಟ್ಟಣದ ಮಲೆ ಮಹದೇಶ್ವರ ಕ್ರೀಡಾಂಗಣದಲ್ಲಿ ಸಂಭ್ರಮ ಸಡಗರದ 77 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಿಕ್ಕಿರಿದು ನೆರೆದಿದ್ದ ವಿದ್ಯಾರ್ಥಿಗಳು, ಸಾರ್ವಜನಿಕರ ಸಮ್ಮುಖದಲ್ಲಿ ದೇಶಭಕ್ತಿಯನ್ನು ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೋರೆಗೊಂಡವು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿ ಗಮನ ಸೆಳೆದರು. ಪೊಲೀಸ್ ಇಲಾಖೆಯಿಂದಲೂ ಅತ್ಯಕರ್ಷಕ ಪಥ ಸ೦ಚಲನ ನಡೆಸಲಾಯಿತು.ಧ್ವಜಾರೋಹಣವನ್ನು ತಹಸೀಲ್ದಾರ್ ವೈಕೆ ಗುರುಪ್ರಸಾದ್ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ಶಾಸಕ ಎಮ್. ಆರ್.ಮಂಜುನಾಥ್ ವಹಿಸಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಅಧ್ಯಕ್ಷರು ತಹಸೀಲ್ದಾರ್ ವೈಕೆ ಗುರುಪ್ರಸಾದ್, ಉಪಾಧ್ಯಕ್ಷರು ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ್ ಎಂ, ದೈಹಿಕ ಪರಿವೀಕ್ಷಕರಾದ ಮಹದೇವ್, ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಮಹೇಶ್ ಕುಮಾರ್, ಬೆಸ್ಕಾಂ ನ ಎಇ ಶಂಕರ್, ಗ್ರೇಡ್ 2 ಡಾ. ಧನಂಜಯ್, ಸರ್ಕಲ್ ಇನ್ಸೆಕ್ಟರ್ ಶಶಿಕುಮಾರ್, ಪಿಎಸ್‌ಐ ಮಂಜುನಾಥ್ ಪ್ರಸಾದ್, ಪಟ್ಟಣ ಪಂಚಾಯತಿ ಸದಸ್ಯರಾದ ಹರೀಶ್ ಕುಮಾರ್, ಗಿರೀಶ್ ಕುಮಾರ್ ಸಂಪತ್ ಕುಮಾರ್, ಮಹೇಶ್ ನಾಯಕ, ಮಹೇಶ್, ರೂಪ, ಮಂಜುಳಾ,ಆನಂದ್,ಸುದೇಶ್ ಇನ್ನಿತರರು ಹಾಜರಿದ್ದರು.
