ಮೈಸೂರು:ಮೈಸೂರು ನಗರದ ಬನ್ನಿಮಂಟಪದಲ್ಲಿರುವ ಲಯನ್ಸ್ ಶಾಲೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಆಚರಿಸಲಾಯಿತು ಹಾಗೂ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.
ಲಯನ್ ಸಂಸ್ಥೆ ಅಧ್ಯಕ್ಷರಾದ ಲಯನ್ ಬಿ ಭಾರತಿ, ಖಜಾಂಚಿ ಲಯನ್ ಜೆ ಲೋಕೇಶ್,ಶಾಲೆಯ ಚೇರಮನ್ ಲಯನ್ ಎನ್ ಟಿ ಶ್ರೀನಿವಾಸ್ ,ಮಾಜಿ ಗವರ್ನರ್ ಲಯನ್ ಡಾ ಪ್ರಭಾ ಮಂಡಲ್, ವಲಯ ಅಧ್ಯಕ್ಷರಾದ ಗಿರೀಶ್. ಸದಸ್ಯರಾದ ವಿರೂಪಾಕ್ಷ, ಸುರೇಶ್, ಮುಕೇಶ್, ರಮೇಶ, ಪ್ರಸನ್ನ, ಮುದ್ದು ಮಲ್ಲೇಗೌಡ,ಶಾಲೆ ಮುಖ್ಯ ಶಿಕ್ಷಕಿ ಹೇಮಾವತಿ ಹಾಗೂ ಶಿಕ್ಷಕರು ಮತ್ತು ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಂತರ ಮಕ್ಕಳಿಗೆ ಸಿಹಿ ವಿತರಿಸಲಾಯಿತು .