ಚಳ್ಳಕೆರೆ: ತ್ಯಾಗರಾಜನಗರದ ಚಂದ್ರಪುಷ್ಪ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ಡಾ. ಚಂದ್ರನಾಯಕ್ ಇವರಿಂದ ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಏರ್ಪಡಿಸಲಾಗಿತ್ತು.
ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಶಾಸಕ ಟಿ ರಘುಮೂರ್ತಿ ಉದ್ಘಾಟನೆ ಮಾಡಿ ಮಾತನಾಡಿದ ಶಾಸಕರು ಚಂದ್ರನಾಯಕ್ ವಿಶೇಷ ಮಕ್ಕಳ ತಜ್ಞರು ಹಾಗೂ ನ್ಯೂನತೆಯನ್ನು ಹೊಂದಿದ ಮಕ್ಕಳಿಗೆ ಅತ್ಯುತ್ತಮ ಚಿಕಿತ್ಸೆಯನ್ನು ನೀಡುವ ಪರಣಿತಿಯನ್ನು ಹೊಂದಿದ್ದಾರೆ, ಜೊತೆಗೆ ಸಾಮಾನ್ಯ ಕಾಯಿಲೆಗಳಾದಂತಹ ಬಿಪಿ, ಶುಗರ್ ಇನ್ನಿತರ ಖಾಯಿಲೆಗಳಿಗೆ ಉತ್ತಮ ಚಿಕಿತ್ಸೆ ನೀಡುವ ಪರಿಣತಿಯನ್ನು ಹೊಂದಿದ್ದಾರೆ ಎಂದು ಶಾಸಕರು ತಿಳಿಸಿದರು.
ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಕ್ಕಳಿಗೆ ಉಚಿತ ಚಿಕಿತ್ಸೆ ಜೊತೆಗೆ ಉಚಿತ ಔಷಧಿ ಮಾತ್ರೆ ವಿತರಣೆ ಮಾಡಲಾಯಿತು. ನಂತರ ಮಾತನಾಡಿದ ಡಾಕ್ಟರ್ ಚಂದ್ರಶೇಖರ್ ಈ ರೀತಿ ಇನ್ನೂ ಹಲವು ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು ಸಾರ್ವಜನಿಕರು ಈ ರೀತಿ ಶಿಬಿರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಡಾಕ್ಟರ್ ಚಂದ್ರನಾಯಕ್ ಮನವಿ ಮಾಡಿದರು.
