Sunday, April 20, 2025
Google search engine

Homeರಾಜ್ಯಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ಜಪ್ತಿ

ಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್ ಜಪ್ತಿ

ದೇವನಹಳ್ಳಿ: ಬೆಂಗಳೂರು ಏರ್​ ಪೋರ್ಟ್ ​​ನಲ್ಲಿ ಪ್ರಯಾಣಿಕನಿಂದ 30 ಚಿನ್ನದ ಬಿಸ್ಕೆಟ್​ ಗಳನ್ನು ಕೆಂಪೇಗೌಡ ಏರ್ ​ಪೋರ್ಟ್​​ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೋಲ್ಕತ್ತಾದಿಂದ ಬೆಂಗಳೂರು ಏರ್ ಪೋರ್ಟ್ ಗೆ ಪ್ರಯಾಣಿಕ ಬಂದಿಳಿದಿದ್ದನು. ಈ ವೇಳೆ ಅನುಮಾನಗೊಂಡು ವ್ಯಕ್ತಿಯನ್ನ ತಪಾಸಣೆ ನಡೆಸಿದ್ದು ಅಕ್ರಮವಾಗಿ ಚಿನ್ನದ ಬಿಸ್ಕೆಟ್ ಸಾಗಿಸುತ್ತಿದ್ದು ಕಂಡು ಬಂದಿದೆ.

ತಕ್ಷಣ ಕಸ್ಟಮ್ ಅಧಿಕಾರಿಗಳು ವ್ಯಕ್ತಿಯಿಂದ 36 ಲಕ್ಷ ಮೌಲ್ಯದ 600 ಗ್ರಾಂ ತೂಕದ 30 ಚಿನ್ನದ ಬಿಸ್ಕೆಟ್​ಗಳನ್ನು ಜಪ್ತಿಮಾಡಿ , ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular