ಮಂಡ್ಯ: ಮಲಗಿದ್ದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಶವ ಪತ್ತೆಯಾಗಿರುವ ಘಟನೆ ಮಂಡ್ಯದ ನಾಗಮಂಗಲದ ಟಿಬಿ ಬಡಾವಣೆಯ ಮುಳುಕಟ್ಟೆ ರಸ್ತೆಯಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಮಧುಶ್ರಿ (25) ಮೃತ ದುರ್ದೈವಿ.
ಕಳೆದ ಒಂದುವರೆ ವರ್ಷಗಳಿಂದಲೂ ಬಾಡಿಗೆ ಮನೆಯಲ್ಲಿ ಮಧುಶ್ರೀ ಮತ್ತು ದಂಪತಿ ವಾಸವಾಗಿದ್ದರು.
ಕರಡಹಳ್ಳಿ ಗ್ರಾಮದ ಮಂಜುನಾಥ್ ಜೊತೆ ಕಳೆದ ಐದು ವರ್ಷಗಳ ಹಿಂದೆ ಮಧುಶ್ರೀ ಮದುವೆಯಾಗಿತ್ತು. ಇವರಿಗೆ 4 ವರ್ಷದ ಗಂಡು ಮಗುವಿದೆ.
ಪತಿ ಮಂಜುನಾಥ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದನು. ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮಂಜುನಾಥ್ ನಿನ್ನೆ ಮಧ್ಯಾಹ್ನ ಬೆಂಗಳೂರಿನಿಂದ ಮನೆಗೆ ಬಂದಿದ್ದ. ಈ ವೇಳೆ ಮಂಜುನಾಥ್ ಮತ್ತು ಮಧುಶ್ರೀ ನಡುವೆ ಜಗಳವಾಗಿದೆ.
ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿ, ಮಗನನ್ನ ಕರೆದುಕೊಂಡು ಪರಾರಿಯಾಗಿರೋ ಶಂಕೆ ವ್ಯಕ್ತವಾಗಿದೆ.
ಇಂದು ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.