Saturday, April 19, 2025
Google search engine

Homeರಾಜ್ಯಸುದ್ದಿಜಾಲಕೆ.ಆರ್.ನಗರ:ಅರಸುಜಯಂತಿ ಪೂರ್ವಭಾವಿ ಸಭೆ

ಕೆ.ಆರ್.ನಗರ:ಅರಸುಜಯಂತಿ ಪೂರ್ವಭಾವಿ ಸಭೆ

ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಹಶೀಲ್ದಾರ್‌ರವರಿಗೆ ಆದೇಶ-ಶಾಸಕ ಡಿ.ರವಿಶಂಕರ್

ಹೊಸೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತದ ವತಿಯಿಂದ ಆ.೨೦ರಂದು ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜುಅರಸ್ ರವರ ಜನ್ಮ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು.
ಬುಧವಾರ ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಅರಸು ರವರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಶಾಸಕ ಡಿ.ರವಿಶಂಕರ್ ಮಾತನಾಡಿ ಆಚರಣೆ ವೇಳೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದಲ್ಲದೆ ಈ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಹಶೀಲ್ದಾರ್‌ರವರಿಗೆ ಆದೇಶಿಸಿದರು.
ಅರಸುರವರ ಅನುಯಾಯಿಗಳು ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ಮಾವನೂರು, ಬ್ಯಾಡರಹಳ್ಳಿ, ಮಾವತ್ತೂರು, ಮಳಲಿ, ನಿಜನಗನಹಳ್ಳಿ, ಹರದನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿದ್ದು ಜಯಂತಿ ಆಚರಣಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಆಗಮಿಸಲು ವೈಯುಕ್ತಿಕವಾಗಿ ವಾಹನದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಿಸಿಎಂ ಇಲಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು ಈ ಬಗ್ಗೆ ದೂರವಾಣಿ ಮೂಲಕ ಸಮಾಜದ ಮುಖಂಡರಿಗೆ ತಿಳಿಸಬೇಕು ಎಂದು ಇಲಾಖಾ ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು ಅರಸುರವರ ಜಯಂತಿಯನ್ನು ವಿಜ್ರಂಭಣೆಯಿoದ ಆಚರಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ಕೋರಿದರು.
ತಹಶೀಲ್ದಾರ್ ಸಿ.ಎಸ್.ಪೂರ್ಣಿಮ, ಇಒ ಸತೀಶ್, ಬಿಸಿಎಂ ಅಧಿಕಾರಿ ಚಂದ್ರಕಲಾ, ಜಿ.ಜೆ.ಮಹೇಶ್, ಬಿಇಒ ಆರ್.ಕೃಷ್ಣಪ್ಪ, ಉಪನೊಂದಣಾಧಿಕಾರಿ ಅನಿತಾ, ಆರೋಗ್ಯಾಧಿಕಾರಿ ಡಾ.ಕೆ.ಆರ್.ಮಹೇಂದ್ರಪ್ಪ, ಅಗ್ನಿ ಶಾಮಕ ಠಾಣೆಯ ಲಕ್ಷಿö್ಮಕಾಂತಯಾದವ್, ಸಮಾಜ ಕಲ್ಯಾಣಾಧಿಕಾರಿ ಅಶೋಕ್, ಶಿಕ್ಷಣ ಸಂಯೋಜಕ ದಾಸಪ್ಪ, ಗ್ರಾಮ ಲೆಕ್ಕಾಧಿಕಾರಿ ರಜಿತ್, ಸಮಾಜದ ಮುಖಂಡರಾದ ಸುಬ್ಬರಾಜೇಅರಸ್, ಪ್ರತಾಪ್ ರಾಜೇಅರಸ್, ಕೃಷ್ಣರಾಜೇಅರಸ್, ಪುರಸಭೆ ಸದಸ್ಯರಾದ ಜಾವಿದ್‌ಪಾಷ, ನಟರಾಜು, ಕಾಂಗ್ರೆಸ್ ಮುಖಂಡರಾದ ಯಶವಂತ್, ದೊಡ್ಡಕೊಪ್ಪಲುರವಿ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular