Saturday, April 19, 2025
Google search engine

Homeರಾಜ್ಯಪರಿಸರ ನೈರ್ಮಲ್ಯದಿಂದ ರೋಗ ತಡೆ

ಪರಿಸರ ನೈರ್ಮಲ್ಯದಿಂದ ರೋಗ ತಡೆ

ಚಿತ್ರದುರ್ಗ: ಸ್ವಚ್ಛವಾದ ಕೈಗಳು, ಶುದ್ಧ ಕುಡಿಯುವ ನೀರು ಹಲವಾರು ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪರಿಸರ ನೈರ್ಮಲ್ಯದಿಂದ ರೋಗಗಳನ್ನು ತಡೆಗಟ್ಟಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ನಗರದ ವಾರ್ಡ್ ನಂ 17ರ ಆಶ್ರಯ ಬಡಾವಣೆಯ ಸುತ್ತಮುತ್ತ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳ ತಂಡದಿಂದ ಆಶ್ರಯ ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ಸಂಚರಿಸಿ ಜಾಗೃತಿ ಜಾಥಾ ನಡೆಸಿ, ಶಾಲೆ ಮತ್ತು ಅಂಗನವಾಡಿಗಳಲ್ಲಿ ಶುಚಿತ್ವ, ಶುದ್ಧ ನೀರಿನ ಉಪಯೋಗದ ಬಗ್ಗೆ ಮಾಹಿತಿ ಕರಪತ್ರಗಳನ್ನೂ ವಿತರಿಸಿ ನಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕರಿಗೆ ಶಾಲಾ ಶಿಕ್ಷಕರಿಗೆ, ಮಕ್ಕಳಿಗೆ ಎಸ್‍ಡಿಎಂಸಿ ಸದಸ್ಯರಿಗೆ ಸಭೆ ನಡೆಸಿ ಅವರು ಮಾತನಾಡಿದರು.

ಶುದ್ಧವಾದ ಕುಡಿಯುವ ನೀರಿನ ಉಪಯೋಗದಿಂದ ರೋಗಗಳನ್ನು ನಿಯಂತ್ರಿಸಬಹುದು. ಕಲುಷಿತ ನೀರಿನ ಸೇವನೆಯಿಂದ ಕರುಳು ಬೇನೆ, ಕಾಲರಾ, ಟೈಫಾಯ್ಡ್ ಕಾಮಾಲೆ ಇನ್ನಿತರೆ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಸ್ವಚ್ಛವಾದ ಕೈಗಳು, ಶುದ್ಧ ಕುಡಿಯುವ ನೀರು ಹಲವಾರು ಸಾಂಕ್ರಾಮಿಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಮಾತನಾಡಿ, ಜನರು ಆತಂಕ ಭಯಪಡುವುದು ಬೇಡ. ಶುದ್ಧವಾದ ನೀರು, ಆಹಾರ ಸೇವನೆ ಮಾಡಿ. ತೆರೆದಿಟ್ಟ ಆಹಾರ ಪದಾರ್ಥಗಳನ್ನು ಹಣ್ಣುಗಳನ್ನು ತಿನ್ನುವುದು ಬೇಡ. ಮನೆಯ ಸುತ್ತಮುತ್ತಲಿನ ವಾತಾವರಣ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳಿ ಎಂದರು. ಬಯಲು ಮಲವಿಸರ್ಜನೆ ಮಾಡದೆ ಶೌಚಾಲಯ ಬಳಕೆ ಮಾಡಿ. ಆಹಾರ ಪದಾರ್ಥಗಳನ್ನು ನೊಣಗಳಿಂದ ಸಂರಕ್ಷಣೆ ಮಾಡಿಕೊಳ್ಳಿ. ಮೆದು ಆಹಾರ, ಆಹಾರ ಗಂಜಿ, ಮಜ್ಜಿಗೆ, ಎಳನೀರು ಹೇರಳವಾಗಿ ಸೇವನೆ ಮಾಡಿ ತಮ್ಮ ಮತ್ತು ಇತರರ ಆರೋಗ್ಯ ಕಾಪಾಡುವಲ್ಲಿ ಜವಾಬ್ದಾರಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಆರೋಗ್ಯ ನಿರೀಕ್ಷಣಾಧಿಕಾರಿ ಗಂಗಾಧರ್ ರೆಡ್ಡಿ ಅವರು ಮಕ್ಕಳಿಗೆ, ಶಾಲಾ ಶಿಕ್ಷಕರಿಗೆ, ಎಸ್‍ಡಿಎಂಸಿ ಸದಸ್ಯರಿಗೆ ಕೈ ತೊಳೆಯುವ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಜನಜಾಗೃತಿ ಸಪ್ತಾಹದಲ್ಲಿ ಮಾರುತಿ ನಗರದ ವೈದ್ಯಾಧಿಕಾರಿ ಡಾ. ಯಶಸ್, ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ, ಶ್ರೀಧರ್, ಮಧುಸೂದನ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ತಿಪ್ಪಮ್ಮ, ಮಾರುತಿ ನಗರ ಆರೋಗ್ಯ ಕೇಂದ್ರದ ಎಲ್ಲಾ ಆರೋಗ್ಯ ಸುರಕ್ಷತಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಶಾಲಾ ಶಿಕ್ಷಕರಾದ ರುದ್ರಪ್ಪ, ನಿರ್ಮಲ ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular