ಬಾಗಲಕೋಟ: ಶ್ರಾವಣ ಮಾಸದ ಮೊದಲ ದಿನವಾದ ಇಂದು ಮುಧೋಳ ತಾಲೂಕಿನ ಲೋಕಾಪುರದ ಲೋಕದೊಡೆಯ ಲೋಕೇಶ್ವರನಿಗೆ ವಿಶೇಷ ಹನುಮಂತನ ರೂಪದಲ್ಲಿ ಬುದ್ಧಿಪೂಜೆ ಮಾಡಲಾಯಿತು. ಮಹಿಳೆಯರು, ಪುರುಷ ಭಕ್ತಾದಿಗಳು, ಮಕ್ಕಳಾದಿಯಾಗಿ ಸೇರಿದಂತೆ ಲೋಕೇಶ್ವರನ ದರ್ಶನ ಪಡೆದು ಕೃಪೆಗೆ ಪಾತ್ರರಾದರು. ಶ್ರಾವಣ ಮಾಸದಲ್ಲಿ ಇಂದಿನಿಂದ ಲೋಕೇಶ್ವರ ವಿವಿಧ ರೂಪದಲ್ಲಿ ಭಕ್ತಾದಿಗಳಿಗೆ ದರ್ಶನ ನೀಡುವುದು ವಿಶೇಷವಾಗಿದ್ದು, ಅದು ಅದ್ಭುತವಾಗಿಯೂ ಇರುವುದು ಸತ್ಯವಾಗಿದೆ.