ಮಂಡ್ಯ: ಸುರೇಶ್ ಗೌಡ ಮೆಂಟಲಿ ವೀಕ್ ಆಗಿದ್ದಾರೆ ತಲೆ ಕೆಟ್ಟು ಏನೇನೋ ಮಾತನಾಡ್ತಾರೆ. ಚಲುವರಾಯಸ್ವಾಮಿ ಏಳಿಗೆಯನ್ನು ಅವರಿಗೆ ಸಹಿಸಲಾಗ್ತಿಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಕಾಂಗ್ರೆಸ್ ಯುವ ಮುಖಂಡ ಪ್ರಸನ್ನ ವಾಗ್ದಾಳಿ ನಡೆಸಿದ್ದಾರೆ.
ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಮಾಜಿ ಶಾಸಕ ಸುರೇಶ್ ಗೌಡ ವಾಗ್ದಾಳಿ ನಡೆಸಿದ ಬೆನ್ನಲ್ಲೆ ಇಂದು ಸಚಿವರ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.
ಯುವ ಕಾಂಗ್ರೆಸ್ ಮುಖಂಡ ಪ್ರಸನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಸುರೇಶ್ ಗೌಡ್ರು ಕುಡಿದ ಅಮಲಿನಲ್ಲಿ ಸಚಿವರ ವಿರುದ್ದ ಮಾತನಾಡ್ತಿದ್ದಾರೆ. ಚಲುವರಾಯಸ್ವಾಮಿ ಮಾಟ ಮಂತ್ರ ಮಾಡಿಸ್ತಾರೆ ಅಂತಿರಲ್ಲ ಒಬ್ಬ ವಿದ್ಯಾವಂತ ಇದನ್ನೆಲ್ಲ ನಂಬುತ್ತಿಯಾ? ಮಾಟ ಮಂತ್ರ ಮಾಡಿಸುವವರು ನಿಮ್ಮ ಪಕ್ಷದಲ್ಲೆ ಇದ್ದಾರೆ. ನಿಂಬೆಹಣ್ಣು ಮಂತ್ರಿ ಅಂತ ಯಾರನ್ನ ಕರಿತಾರೆ? ಯಾಗ ಹೋಮ ಎಲ್ಲಾ ಯಾರು ಮಾಡ್ತಿಸ್ತಾರೆ ಎಂದು ಪ್ರಶ್ನಿಸಿದರು.
300ಕೋಟಿ ಭ್ರಷ್ಟಾಚಾರ ಅಂತ ಆರೋಪ ಮಾಟ್ತಿರಿ ನಾಚಿಕೆಯಾಗಬೇಕು ನಿಮಗೆ. ಯಾರು ಜೆಡಿ ಗಳು ಮಾತ್ರ ವರ್ಗಾವಣೆ ಆಗಿರಬೇಕು ಅಷ್ಟೆ. ಮಂಡ್ಯ ಜಿಲ್ಲೆಯಲ್ಲಿ ಯಾರು ಬದಲಾವಣೆ ಹಾಗಿಲ್ಲ. ಕಳೆದ ಬಾರಿ ಶಾಸಕನಾಗಿ ಪರ್ಸೆಂಟೆಜ್ ಪಿಕ್ಸ್ ಮಾಡಿದ್ದು ನೀನು. ಸಚಿವರು ದುಡ್ಡು ಕೇಳ್ತಿದ್ದಾರೆ ಅಂತ ಯಾರಾದರೂ ಗುತ್ತಿಗೆದಾರ ಕರೆತಂದು ಹೇಳಿಸಿ ನೋಡೋಣಾ ಎಂದು ಸವಾಲು ಹಾಕಿದರು.
ಜಮೀರ್ ಚಲುವರಾಯಸ್ವಾಮಿ ಸ್ನೇಹಿತರು ಮನಸ್ತಾಪದ ವಿಚಾರ ಅವರಿಗೆ ಬಿಟ್ಟದ್ದು ನಿಮಗೆ ಯಾಕೆ? ಅದರ ಅವಶ್ಯಕತೆ ಇದ್ಯಾ? ನಿನ್ನ ಕೆಲಸ ನೀನು ಮಾಡು. ಸುರೇಶ್ ಗೌಡ ಗೌರವವಾಗಿ ನಡೆದುಕೊಳ್ಳಿ. ಚಲುವರಾಯಸ್ವಾಮಿ ಗೆದ್ದು ಎರಡೂವರೆ ತಿಂಗಳಾಗಿದೆ. ಆಗ್ಲೆ ಇಷ್ಟೊಂದು ಹೊಟ್ಟೆಕಿಚ್ಚು ಯಾಕೆ ಎಂದು ಕಿಡಿಕಾರಿದರು.
ಕಂಡ್ಯಕ್ಟರ್ ಕೈಲಿ ವಿಷ ಕುಡಿಸ್ತಿಯಾ ಇವಾಗ ಮಾರಿಕೊಂಡ ಅಂತಿಯಾ. ಈ ಎಲ್ಲಾ ಆಟಗಳನ್ನು ನೋಡಿದ್ರೆ ನೀನೇ ವಿಷ ಕುಡಿಯುವ ಹಾಗಿದ್ಯಾ! ನಮ್ಮ ಕಣ್ಣು ಮುಂದೆ ಇರಬೇಕು. ವಿದ್ಯಾವಂತ ಶಾಸಕ ಯಾವ ಆಧಾರದ ಮೇಲೆ ಆರೋಪ ಮಾಡ್ತಿಯಾ? ಏಕವಚನ ನಿನಗೆ ಮಾತ್ರ ಅಲ್ಲ ನಮಗು ಬರುತ್ತೆ? ಸಚಿವರ ವಿರುದ್ಧ ಮಾತನಾಡಬೇಕಾದ್ರೆ ನಾಲಿಗೆ ಮೇಲೆ ಎಚ್ಚರ ಇರಲಿ ಎಂದು ಹರಿಹಾಯ್ದರು.