ಹೆಚ್.ಡಿ. ಕೋಟೆ : ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯವತಿಯಿoದ ತಾಲ್ಲೂಕಿನ ಡಿ.ಬಿ. ಕುಪ್ಪೆ ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.
ಭಾರತದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ ನವದೆಹಲಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಮೈಸೂರು, ಜೆ.ಎಸ್.ಎಸ್. ಉನ್ನತಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಹಾಗೂ ವಾಕ್‌ಶ್ರವಣ ಸಂಸ್ಥೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ನಡೆಯಿತು. ಅಸಾಧಾರಣ ಶಾಲಾಮಕ್ಕಳ ಆರೋಗ್ಯ ಶಿಬಿರದಲ್ಲಿ ಸಾಮಾನ್ಯ ತಪಾಸಣೆ ದಂತಚಿಕಿತ್ಸೆ, ಕಿವಿ, ಮೂಗು, ಗಂಟಲು, ನೇತ್ರ ತಪಾಸಣೆ, ರಕ್ತ ಪರೀಕ್ಷೆ, ವಾಕ್ ಮತ್ತು ಶ್ರವಣ ಪರೀಕ್ಷೆ, ಮಕ್ಕಳಲ್ಲಿರುವ ಪೌಷ್ಠಿಕಾಂಶದ ಕೊರತೆ ಇರುವ ೧೮೦ ವಿದ್ಯಾರ್ಥಿಗಳಿಗೆ ೩೦ ಜನರ ವೈದ್ಯರ ತಂಡ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿ ವಿತರಿಸಲಾಯಿತು. ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಎಲ್. ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆಯಿoದ ಇದು ೩ನೇ ಆರೋಗ್ಯ ತಪಾಸಣಾ ಶಿಭಿರವಾಗಿದೆ.
ಈ ಹಿಂದೆ ಹುಣಸೂರು ತಾಲ್ಲೂಕು, ನೆಲ್ಲೂರುಪಾಲ ಆಶ್ರಮಶಾಲೆಯಲ್ಲಿ ಮಕ್ಕಳಿಗೆ ಆರೋಗ್ಯ ನಡೆಸಿದಾಗ ೪೮ ಮಕ್ಕಳಿಗೆ ರಕ್ತಹೀನತೆ ಕಂಡುಬoದಿದೆ. ೩ ಮಕ್ಕಳಿಗೆ ಚರ್ಮದ ಸಂಬoಧಿಸಿದ ಕಾಯಿಲೆ ಇದೆ. ೫ ಮಕ್ಕಳಿಗೆ ಅನ್ನಾಂಗದ ಕೊರತೆ, ೫ ಮಕ್ಕಳಿಗೆ ಹೃದಯದಲ್ಲಿ ತೊಂದರೆ ಕಂಡುಬoದಿದ್ದು, ಈ ಎಲ್ಲಾ ಮಕ್ಕಳಿಗೆ ಸಂಬoಧಪಟ್ಟ ವೈದ್ಯರ ಬಳಿ ಕರೆತಂದು ಚಿಕಿತ್ಸೆ ಕೊಡಿಸುತ್ತೇವೆ. ಡಿ.ಬಿ. ಕುಪ್ಪೆ ಸುತ್ತಮುತ್ತ ಯಾವುದೇ ಆಸ್ಪತೆಗಳಿಲ್ಲ. ಇದು ಕರ್ನಾಟಕದ ಕಡೆ ಗ್ರಾಮವಾಗಿದೆ. ಆದ್ದರಿಂದ ನಾವು ಮುಂದಿನ ದಿನಗಳಲ್ಲಿ ಹಾಡಿ ಜನರಿಗೂ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸುತ್ತೇವೆ. ಚಾಮರಾಜನಗರ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಆಶ್ರಮಶಾಲೆಗಳಲ್ಲಿಯೂ ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಲಾಗುವುದು.

ಈ ಶಿಬಿರ ಅತ್ಯಂತ ಯಶಸ್ವಿಯಾಗಿದ್ದು, ಎಲ್ಲಾ ವೈದ್ಯರು ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ, ಬಿ.ಎಸ್. ಪ್ರಭಾಅರಸ್, ತಾಲ್ಲೂಕು ಕಲ್ಯಾಣಾಧಿಕಾರಿಗಳಾದ ಎಂ. ನಾರಾಯಣಸ್ವಾಮಿ, ಹೆಚ್.ಸಿ. ಬಸವರಾಜು, ಅರುಣ್‌ಪ್ರಭು, ಮುಖ್ಯ ಶಿಕ್ಷಕ ಅಶೋಕ್, ಸಮುದಾಯ ಆರೋಗ್ಯಧಿಕಾರಿ ಡಾ. ರವೀಶ್, ಬಿಗಣಿ, ಜೆ.ಎಸ್.ಎಸ್. ಆಸ್ಪತ್ರೆಯ ಮಕ್ಕಳದಂತ ವೈದ್ಯರಾದ ಡಾ. ಇಂದಿರಾ, ಡಾ|| ಸುಷ್ಮಾ, ಡಾ. ಪ್ರಶಾಂತ್, ಡಾ. ಚೇತನ್, ಡಾ. ಸುನೀತಾಸಿಂಗ್, ಡಾ. ಮಹಾದೇವಪ್ಪ, ಡಾ. ಮೌರ್ಯ, ಡಾ. ಸಾರಾನ್ಸ್ ಹಾಜರಿದ್ದರು.