ನಾಗ್ಪುರ: ಇಂಡಿಗೋಗೆ ಸೇರಿದ ವಾಣಿಜ್ಯ ವಿಮಾನದ ಪೈಲಟ್ ಗುರುವಾರ ನಾಗ್ಪುರದ ಬೋರ್ಡಿಂಗ್ ಗೇಟ್‌ನಲ್ಲಿ ಕುಸಿದು ಸಾವಿಗೀಡಾಗಿದ್ದಾರೆ. ಪೈಲಟ್ ನಾಗ್ಪುರ-ಪುಣೆ ವಿಮಾನವನ್ನು ನಿರ್ವಹಿಸಲು ಸಿದ್ಧರಾಗಿದ್ದರು. ಕುಸಿದು ಬಿದ್ದ ಪೈಲಟ್‌ನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಬುಧವಾರ ಇದೇ ಪೈಲಟ್ ತಿರುವನಂತಪುರದಿಂದ ಪುಣೆ ಮತ್ತು ನಂತರ ಪುಣೆಯಿಂದ ನಾಗ್ಪುರಕ್ಕೆ ಮುಂಜಾನೆ 3 ರಿಂದ 7 ರವರೆಗೆ ವಿಮಾನ ಹಾರಾಟ ನಡೆಸಿದ್ದರು. ಇದರ ನಂತರ, ಅವರು 27 ಗಂಟೆಗಳ ವಿಶ್ರಾಂತಿ ಅವಧಿಯನ್ನು ಹೊಂದಿದ್ದರು. ಗುರುವಾರ ನಾಲ್ಕು ಮಾರ್ಗಗಳಲ್ಲಿ ಹಾರಲು ಯೋಜಿಸಲಾಗಿತ್ತು, ಮೊದಲ ನಿರ್ಗಮನವನ್ನು ಮಧ್ಯಾಹ್ನ 1 ಗಂಟೆಗೆ ನಿಗದಿಪಡಿಸಲಾಗಿತ್ತು. ಗುರುವಾರದಂದು ಅವರ ಆರಂಭಿಕ ಮಾರ್ಗವು ನಾಗ್ಪುರದಿಂದ ಪ್ರಾರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.