ಬಾಗಲಕೋಟೆ: ಕೊಪ್ಪಳ ಏತ ನೀರಾವರಿ ಯೋಜನೆಯ ವಾಲ್ ಓಪನ್ ಆದ ಹಿನ್ನಲೆ ಮುಗಿಲೆತ್ತರಕ್ಕೆ ನೀರು ಚಿಮ್ಮುತ್ತಿದ್ದು, ಸಾಕಷ್ಟು ಪ್ರಮಾಣದಲ್ಲಿ ನೀರು ಪೋಲಾಗಿದೆ.
ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹೊರವಲಯದ ಸಿದ್ದಪ್ಪ ವಡಗೇರಿ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದೆ.
ಚಿಮ್ಮುತ್ತಿರುವ ನೀರು ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದಾರೆ.
ನೀರು ಪೋಲು ಆಗುತ್ತಿದ್ದರು ನೀರಾವರಿ ಇಲಾಖೆ ದುರಸ್ಥಿಗೆ ಮುಂದಾಗದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.