ಮೈಸೂರು: ಬಿಜೆಪಿ ಶಾಸಕರು ಕಾಂಗ್ರೆಸ್ ಸೇರುವ ವಿಚಾರವಾಗಿ ಮಾಜಿ ಸಚಿವ ಸಿ ಟಿ ರವಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ರಾಜ್ಯಕ್ಕೆ ದುರ್ದೆಸೆ ಶುರುವಾಗಿದೆ. ಬಿಜೆಪಿ ಅಧಿಕಾರ ಇದ್ದಾಗ ಕೆ.ಆರ್.ಎಸ್ ಭರ್ತಿಯಾಗದ ಸ್ಥಿತಿ ಇರಲಿಲ್ಲ. ಈಗ ರೈತರಿಗೆ ನೀರಿಲ್ಲ, ಜಲಾಶಯ ಖಾಲಿಯಾಗಿದೆ.
ಪವರ್ ಕಟ್, ಲೋಡ್ ಶೆಡಿಂಗ್ ಶುರುವಾಗಿದೆ. ಶೂನ್ಯ ಬಿಲ್ ಅಂತರೆ, ಕರೆಂಟೇ ಇಲ್ಲದ ಮೇಲೆ ಶೂನ್ಯ ಬಿಲ್ ಬರುತ್ತೆ. ಇಂತಹ ದುರ್ದೆಸೆ ಇರುವ ಸಂಧರ್ಭದಲ್ಲಿ ಕಾಂಗ್ರೆಸ್ ಹೋಗ್ತಾರ ಎಂದು ನಂಬಲ್ಲ. ಹೋಗೋರನ್ನ ರಾಜಕೀಯ ಜಾಣ್ಮೆ ಇರೋರು,ಬುದ್ದಿವಂತರು ಎಂದು ಹೇಳಲ್ಲ. ಹೋಗುವವರಿಗೆ ದೂರಾಲೋಚನೆ ಇದೆ ಎಂದು ಹೇಳಲಾಗಲ್ಲ. ಸರ್ಕಾರ ಬಂದಾಗಿನಿಂದ ಅಲ್ಲಿನ ಹಿರಿಯ ಶಾಸಕರಿಗೆ ಸಮಾಧಾನ ಇಲ್ಲ.
ಇಲ್ಲಿಂದ ಹೋದವರಿಗೆ ಏನ್ ಸಮಾಧನಾನ ಸಿಗುತ್ತೆ. ಇದರಿಂದ ಹೀಗುವ ಸಾಧ್ಯತೆ ಇಲ್ಲ ಎಂದು ನಂಬುತ್ತೇನೆ. ಸೋಮಶೇಖರ್ ಅವರ ಜೊತೆ ಮಾತನಾಡುತ್ತೇನೆ. ಅವರ ಭಾವನೆ ಏನಿದೆ ಎಂದು ತಿಳಿದುಕೊಂಡು ಉಳಿದವರ ಜೊತೆ ಮಾತನಾಡುತ್ತೇನೆ. ಚುನಾವಣೆ ಮುಗಿದು 3 ತಿಂಗಳಾಗಿದೆ. ನಾವು ಸೋತಿರುವವರೆ ಇನ್ನೊಬ್ಬರ ಕಡೆ ಬೊಟ್ಟು ಮಾಡುತ್ತಿಲ್ಲ. ನಾವು ಸೋತಿರೋದಕ್ಕೆ ತಪ್ಪು ನಮ್ಮದು ಅಂತ ಹೇಳ್ತಿದ್ದೇವೆ. ಸೋಮಶೇಖರ್ ಜೊತೆ ಪೋನ್ ನಲ್ಲಿ ಮಾತಮಾಡಿದ್ದೇನೆ. ಕೂತು ಮಾತನಾಡಿದ ನಂತರ ಎಲ್ಲವು ಬಗೆಹರಿಯುತ್ತೆ ಎಂದು ಹೇಳಿದರು.
ನಮಗೆ ರಾಜ್ಯದ ಜನರ ಬಗ್ಗೆ ಆತಂಕ ಇದೆ.ಈ ಸರ್ಕಾರ ಬಂದ ನಂತರ ಭವಿಷ್ಯದ ಚಿಂತನೆ ಎನ್ನುವುದು ಮರಿಚಿಕೆ.ಸಂಬಳ ಕೊಡಲಾಗುತ್ತಿಲ್ಲ,ಅಭಿವೃದ್ಧಿ, ಉದ್ಯೋಗ ಸೃಷ್ಟಿ ಇಲ್ಲ.ಕೇವಲ ಓಟ್ ಗಾಗಿ 5 ಗ್ಯಾರಂಟಿಗಳ ಹಿಂದೆ ಬಿದ್ದಿದ್ದಾರೆ.ಇದರ ಪರಿಣಾಮ ನೋಡುತ್ತಿದ್ದೀರ.ರಾಜ್ಯದಲ್ಲಿ ಬೆಲೆ ಏರಿಕೆ ಎಲ್ಲಾ ದಾಖಲೆ ಮೀರಿಸುವ ಸ್ಥಿತಿ ಬರಬಹುದು.
ಭವಿಷ್ಯದ ಮೈಸೂರು ಯೋಜನೆ ಏನು ಅಂತ ಸಿದ್ದರಾಮಯ್ಯರನ್ನ ಕೇಳಿದ್ರೆ ಅವರ ಬಳಿ ಉತ್ತರ ಇಲ್ಲ.ಇನ್ನು ಮೂರು ತಿಂಗಳ ಪಾರ್ಲಿಮೆಂಟ್ ಚುನಾವಣೆ ಇದೆ.ಇದಾದ ಬಳಿಕ ಅಸಹನೆ ಆಕ್ರೋಶ ಯಾವ ರೀತಿ ಹೊರ ಹಾಕುತ್ತಾರೆ ನೀವೆ ನೋಡುತ್ತೀರಿ.ಎಲ್ಲವು ಸರಿ ಇದ್ದರೆ ಶಾಸಕರು ಯಾಕೆ ಪತ್ರ ಬರೆದರು.ಕರ್ನಾಟಕ ಭವಿಷ್ಯ ಯೋಚಿಸಬೇಕು.
ಲೋಕಸಭಾ ಚುನಾವಣೆಯಲ್ಲಿ ನಾವು ಕಾಂಗ್ರೆಸ್ ನವರನ್ನು ನಿರ್ಲಕ್ಷ್ಯ ಮಾಡಲ್ಲ. ಅವರನ್ನು ನಿರ್ಲಕ್ಷ್ಯ ಮಾಡಿದ ಪರಿಣಾಮ ಅಧಿಕಾರ ಕಳೆದುಕೊಂಡೆವು. ಅವರ ಗ್ಯಾರಂಟಿ ಚರ್ಚೆಗೆ ಕೌಂಟರ್ ಮಾಡಲಿಲ್ಲ. ಪೇ ಸಿಎಂ ಹೇಳಿದ್ದಾಗ ಕ್ರಮ ತೆಗೆದುಕೊಳ್ಳಲಿಲ್ಲ. ಇದರ ಪರಿಣಾಮ ಅನುಭವಿಸುತ್ತಿದ್ದೇವೆ. ಇದರಿಂದ ಡಿಕೆಶಿ ಆಗಲಿ ಕಾಂಗ್ರೆಸ್ ಚಿಂತನೆಯನ್ನ ನಿರ್ಲಕ್ಷ್ಯ ಮಾಡಲ್ಲ. ನಾವು ಜನರ ಮುಂದೆ ಹೋಗುತ್ತೇವೆ. ನಮ್ಮ ತಪ್ಪು ತಿದ್ದುಕೊಂಡು ಮುಂದೆ ಹೋಗುತ್ತೇವೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಸಿ.ಟಿ.ರವಿ ಹೇಳಿದರು.