ಗದಗ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಹಿನ್ನೆಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ಸಂಗೊಳ್ಳಿ ರಾಯಣ್ಣ, ಕಿತ್ತೂರು ಚೆನ್ನಮ್ಮ ಹಾಗೂ ಶ್ರೀರಾಮನ ಮೂರ್ತಿಗಳ ಬೃಹತ್ ಮೆರವಣಿಗೆ ನಡೆಸಲಾಯಿತು.
ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಚೆನ್ನಮ್ಮಳ ಮೂರ್ತಿ ಗೆ ಪೂಜೆ ಸಲ್ಲಿಸಿ ರಿಬ್ಬನ್ ಕಟ್ ಮಾಡಿ ಮೆರವಣಿಗೆ ಆರಂಭಿಸಲಾಯಿತು.
ಪಂಪ ವೃತ್ತ, ಮ್ಯಾಗೇರಿ ಓಣಿ, ಹಾವಳಿ ಹನಮಂತ ದೇವಸ್ಥಾನ, ಬಜಾರ ರಸ್ತೆ ಮುಖಾಂತರ ಶಿಗ್ಲಿ ನಾಕಾದವರೆಗೂ ಮೆರವಣಿಗೆ ಜರುಗಿತು. ಮೆರವಣಿಗೆಯುದ್ದಕ್ಕೂ ಯುವಕರು ಡಿಜೆಗೆ ಸಖತ್ ಸ್ಟೆಪ್ಸ್ ಹಾಕಿದರು. ಸಹಸ್ರಾರು ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು.