Saturday, April 19, 2025
Google search engine

Homeಅಪರಾಧಮಂಗಳೂರು: ಸಾರ್ವಜನಿಕವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಸಾರ್ವಜನಿಕವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರ ಬಂಧನ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ನಗರದ ಉರ್ವಸ್ಟೋರ್ ಮೈದಾನದ ಬಳಿಯ ದಿನಸಿ ಅಂಗಡಿಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಗೋಕುಲದಾಸ ಶೆಣೈ ಮತ್ತು ದೀಪಕ್ ಶೆಟ್ಟಿ ಬಂಧಿತರು. ಮಟ್ಕಾ ದಂಧೆಗೆ ಬಳಸಿದ್ದ 4,24,490 ರೂ. ನಗದು, ಮೊಬೈಲ್ ಫೋನ್ ಹಾಗೂ ಮಟ್ಕಾ ಬರೆದಿದ್ದ ಚೀಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಉರ್ವ ಠಾಣೆಯ ಇನ್ ಸ್ಪೆಕ್ಟರ್ ಗಳಾದ ಭಾರತಿ, ಹರೀಶ್ ಎಚ್.ಎ. ಎಸ್ಸೈಗಳಾದ ಸಫೀನಾ, ವೆಂಕಟೇಶ್, ರಾಮಚಂದ್ರ, ಸುನೀತಾ, ಭರಣಿ ದೀಕ್ಷಿತ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular