ಬಳ್ಳಾರಿ: ಹಿಂದು ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಆರಂಭವಾದರೆ ಸಾಕು ಸಾಲು ಸಾಲು ಹಬ್ಬಗಳು ದೇಶದೆಲ್ಲೆಡೆ, ಸಡಗರ ಸಂಭ್ರಮ ಮನೆ ಮಾಡಿರುತ್ತದೆ.
ಇನ್ನು ಸಹೋದರತ್ವದ ಮಹತ್ವವನ್ನ ಸಾರುವ. ರಕ್ಷಾಬಂಧನ ಹಬ್ಬವಂತು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ದೇಶದ ಗಡಿಯಲ್ಲಿರುವ ಸೈನಿಕರು, ಸಧಾ ಗಡಿ, ಜಲ ನೆಲ ರಕ್ಷಣೆಯಲ್ಲೆ ನಿರತರಾಗಿರುತ್ತಾರೆ.
ಹಬ್ಬ ಹರಿದಿನಗಳನ್ನ ಸಂಭ್ರಮಿಸುವುದು ವಿರಳ ಹೀಗಾಗಿ, ಬಳ್ಳಾರಿಯ ವಿದ್ಯಾ ಎನ್ನುವ ಯುವತಿ. ಪಂಜಾಬ್, ಹರಿಯಾಣ, ರಾಜಸ್ಥಾನ್, ಕಾಶ್ಮೀರ ಮತ್ತು ಪಚ್ಚಿಮ ಬಂಗಾಳ ಗಡಿಯಲ್ಲಿರುವ ಯೋಧರಿಗೆ 300ಕ್ಕು ಹೆಚ್ಚು ರಾಖಿಗಳನ್ನ ಪೋಸ್ಟ್ ಮಾಡಿ ಶುಭಕೋರುವ ಮೂಲಕ. ದೇಶದ ಗಡಿ ರಕ್ಷಣೆಯಲ್ಲಿರುವ ಯೋಧರಿಗೆ ಸಹೋದರತ್ವ ಸಾರುವ ರಕ್ಷಾಬಂಧನ ಹಬ್ಬದ ಸಂಭ್ರವನ್ನ ಕುಟುಂಬದವರಂತೆ ಆಚರಿಸಲು ಮುಂದಾಗಿದ್ದಾರೆ.
ಬಳ್ಳಾರಿ ನಿವಾಸಿಯಾದ ವಿದ್ಯಾ, ಪದವಿಧರೆ ಕೆಪಿಎಸ್ಸಿ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಕ್ಷಬಂಧನ ಹಬ್ಬವನ್ನ ಯೋಧರಿಗೆ ರಾಖಿ ಕಳುಹಿಸುವ ಮೂಲಕ ಸಂಭ್ರಮಿಸುತ್ತಿದ್ದು. ಯೋಧರು ರಜಾ ದಿನಗಳಲ್ಲಿ ಈ ಸಹೋದರಿಯ ಮನೆಗೆ ಬಂದು ಆತಿಥ್ಯವನ್ನು ಸ್ವೀಕರಿಸುವಂತೆ ಮನವಿಯ ಸಂದೇಶವನ್ನು ನೀಡುತ್ತಿದ್ದಾಳೆ.