ಹನೂರು : ತಾಲೂಕಿನ ಪ್ರಸಿದ್ಧ ಯಾತ್ರ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಬೆಂಗಳೂರು ಮೂಲದ ಗೋವಿಂದರಾಜು ಮತ್ತು ಆತನ ಗೆಳೆಯ ಲೋಕೇಶ್ ಎಂಬ ಭಕ್ತಾದಿಗಳು ಮಹದೇಶ್ವರ ಬೆಟ್ಟಕ್ಕೆ ಬಂದು ಮಹದೇಶ್ವರನ ಸನ್ನಿಧಿಯಲ್ಲಿ ಪೂಜೆಯನ್ನು ಮುಗಿಸಿಕೊಂಡು ತಡರಾತ್ರಿ 11:30 ರಲ್ಲಿ ಇಂಡಿಗನತ್ತ ಹತ್ತಿರವಿರುವ ಅರಣ್ಯ ಇಲಾಖೆ ಚೆಕ್ ಪೋಸ್ಟ್ ದಾಟಿ ನಾಗಮಲೆಗೆ ತೆರಳುತ್ತಿತ್ತ ಸಂದರ್ಭದಲ್ಲಿ ಕಾಡಾನೆ ಒಂದು ಇಬ್ಬರ ಮೇಲೆ ಏಕಾಏಕಿ ದಾಳಿ ನಡೆಸಿದೆ ಅದರಲ್ಲಿ ಗೋವಿಂದರಾಜು ಎಂಬ ವ್ಯಕ್ತಿಗೆ ಆನೆ ತುಳಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ. ಮತ್ತೊಬ್ಬ ಲೋಕೇಶ್ ಅಲ್ಲಿಂದ ಪರಾಗಿ ತನ್ನ ಜೀವವನ್ನು ಉಳಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಅಲ್ಲಿನ ಭಕ್ತಾದಿಗಳ ಮಾತಾಗಿದೆ. ಈ ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದ್ದೆ ಆ ಸಮಯದಲ್ಲಿ ಅವರನ್ನು ತಡೆದಿದ್ದರೆ ಆ ವ್ಯಕ್ತಿಯ ಪ್ರಾಣವಾದ್ರೂ ಉಳಿಯುತ್ತಿತ್ತು ಎಂದು ಗ್ರಾಮಸ್ಥರ ಹಾಗೂ ಭಕ್ತಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸುದ್ದಿ ತಿಳಿದ ಮಲೆ ಮಹದೇಶ್ವರ ಬೆಟ್ಟದ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತಿದಾರೆ ಎಂದು ತಿಳಿದು ಬಂದಿದೆ.