ಬಾಗಲಕೋಟ: ಬಾಗಲಕೋಟೆ ಪಂಚಮಸಾಲಿ ಜಿಲ್ಲಾ ಯುವ ಘಟಕ, ಬಾಗಲಕೋಟ ಜಿಲ್ಲಾ ಲಿಂಗಾಯತ ಪಂಚಮಸಾಲಿ ಘಟಕ , ನಗರ ಘಟಕಗಳ ಆಶ್ರಯದಡಿ ಕೃಷಿ ಮಾರುಕಟ್ಟೆ ಹತ್ತಿರ ಬಾಲ ಮಂದಿರದಲ್ಲಿ ನಾಗರ ಪಂಚಮಿ ಪ್ರಯುಕ್ತ ಹಾಲು ಕುಡಿಯುವ ಹಬ್ಬದ ಸಪ್ತಾಹ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕೂಡಲ ಸಂಗಮದ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಬಾಲ ಮಕ್ಕಳಿಗೆ ಹಾಗೂ ಅನಾಥ ಅಂಧ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಸಪ್ತಾಹಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿ,ಕಳೆದ 27 ವರ್ಷಗಳಿಂದ ಕೂಡಲಸಂಗಮ ಪಂಚಮಸಾಲಿ ಪೀಠದಿಂದ ನಾಗರ ಪಂಚಮಿ ಪ್ರಯುಕ್ತ ಹಾಲನ್ನು ಹಾವಿನ ಹುತ್ತಕ್ಕೆ, ಕಲ್ಲು ನಾಗರಕ್ಕೆ ,ಮಣ್ಣಿಗೆ ಹಾಕುವ ಬದಲು ವಿಕಲಚೇತನ , ಬುದ್ದಿ ಮಾಂದ್ಯ,ರೋಗಿಗಲಿಗೆ ಹಾಗೂ ಶಾಲಾ ಮಕ್ಕಳಿಗೆ ಕುಡಿಸುವ ಕಾರ್ಯಾವನ್ನು ರಾಜ್ಯಾದ್ಯಂತ ಒಂದು ವಾರಗಳ ಕಾಲ ಮಾಡುತ್ತ ಬರಲಾಗಿದೆ.ಇದು ಬಸವಣ್ಣನವರು 12 ನೇ ಶತಮಾನದಲ್ಲಿ ನಮಗೆಲ್ಲ ತೋರಿದ ಮಾರ್ಗ. ಮಣ್ಣಿನ ಜತೆ ರೈತಾಪಿ ಮನುಷ್ಯನ ಸಂಬಂಧ ಅವಿನಾಭಾವವಾಗಿದ್ದು. ಒಂದೊಂದು ಹಬ್ಬಕ್ಕೂ ಒಂದು ಸಂಪ್ರದಾಯ ನಂಬಿಕೆ ಇದೆ.ಅದಕ್ಕೆ ಹಬ್ಬದ ಮಹತ್ವ ಅರಿತು ಆಚರಿಸಬೇಕೆಂದರು.