ಮಂಡ್ಯ: ಮಂಡ್ಯದ ಡಾ. ಬಿಆರ್ ಅಂಬೇಡ್ಕರ್ ಭವನದಲ್ಲಿ ಅರ್ಥಪೂರ್ಣವಾಗಿ ಡಿ.ದೇವರಾಜು ಅರಸು ಅವರ 108ನೇ ದಿನಾಚರಣೆಯನ್ನು ಜಿಲ್ಲಾಡಳಿತ ,ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಲಾಗಿತ್ತು. ಸಾಮಾಜಿಕ ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮುಂತ್ರಿ ಡಿ.ದೇವರಾಜ ಅರಸು ಭಾವಚಿತ್ರಕ್ಕೆ ಸಚಿವ ಚಲುವರಾಯಸ್ವಾಮಿ ಪುಷ್ಪಾರ್ಚನೆ ಸಲ್ಲಿಸಿದರು.
ಇದೇ ವೇಳೆ ಸಚಿವ ಚಲುವರಾಯಸ್ವಾಮಿ ಮಾತನಾಡಿ ಹಿಂದೆ ಆಡಳಿತ ನಡೆಸಿದವರನ್ನು ನಾವು ನೆನಪಿಸಿಕೊಳ್ಳಬೇಕು. ಇತಿಹಾಸ ಗೊತ್ತಿದ್ದರೆ ಇತಿಹಾಸ ಬರೆಯಲು ಸಾಧ್ಯ. ಡಿ ದೇವರಾಜ ಅರಸುರವರ ಕೊಡುಗೆ ಅಪಾರ, ಎರಡು ಬಾರಿ ಸಿಎಂ ಆಗಿ ಕೆಲಸ ಮಾಡಿದ್ದಾರೆ .ಅನೇಕ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಮಹಾನ್ ವ್ಯಕ್ತಿ, ಕನ್ನಡ ಭಾಷೆಗೆ ಆಡಳಿತವನ್ನ ಮಾಡಲು ನಿರ್ಧಾರ ಮಾಡಿದ್ದು ಅರಸುರವರು.
ಜೀತ ಪದ್ಧತಿ ಹೋಗಲಾಡಿಸಲು ಕಠಿಣ ಕ್ರಮ ತೆಗೆದುಕೊಂಡವರು. ಭಾಗ್ಯಜ್ಯೋತಿ, ಹಿಂದೂಳಿದ ಮಕ್ಕಳಿಗೆ ಹಾಸ್ಟೆಲ್ ಎಲ್ಲವನ್ನು ಕೊಟ್ಟವರು ದೇವರಾಜ ಅರಸು ಅಂದ್ರೆ ಪ್ರತಿ ರಾಜ್ಯದ ಜನರಿಗೂ ಗೌರವ ಇದೆ ಎಂದು ಹೇಳಿದರು. ಸಿದ್ದರಾಮಯ್ಯ ಅವರು ಒಳ್ಳೆಯ ಕೆಲಸ ಮಾಡಿದರೆ ದೇವರಾಜ ಅರಸು ಅವರನ್ನು ಫಾಲೋ ಮಾಡುತ್ತಾರೆ. ಐದು ಗ್ಯಾರಂಟಿ ಕೊಟ್ಟಾಗ ಕಾಂಗ್ರೆಸ್ ಪಕ್ಷ ಸರ್ಕಾರಕ್ಕೆ ಸಿದ್ದರಾಮಯ್ಯ, ಡಿಕೆ ಅವರಿಗೆ ರಾಷ್ಟ್ರದ ರಾಜ್ಯಗಳಿಂದ ಅಭಿನಂದನೆಯ ಮಳೆ ಸುರಿದಿದೆ .
ಅನೇಕ ರಾಜ್ಯದ ಸಿಎಂ ಗಳು ಸಹ ಮೆಚ್ಚಿದ್ದಾರೆ ಎಂದು ಹೇಳಿದರು. ಇದೇ ವೇಳೆ ಇಂಜಿನಿಯರಿಂಗ್ ನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು .ಜೊತೆಗೆ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೂ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಗಣಿಗಾ ರವಿ ಕುಮಾರ್ ಡಿ ಸಿ ಡಾ.ಕುಮಾರ್, ಎಸ್ಪಿ ಎನ್.ಯತೀಶ್, ಸಿಇಓ,ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಕಾರ್ಯಕರ್ತರು ಸೇರಿ ಹಲವರು ಭಾಗಿಯಾಗಿದ್ದರು.
