Saturday, April 19, 2025
Google search engine

Homeರಾಜ್ಯಸುದ್ದಿಜಾಲದೇವರಾಜಅರಸರು ಬಡವರ ಬಾಳಿನ ಆಶಾಕಿರಣ-ಶಾಸಕ ಡಿ.ರವಿಶಂಕರ್

ದೇವರಾಜಅರಸರು ಬಡವರ ಬಾಳಿನ ಆಶಾಕಿರಣ-ಶಾಸಕ ಡಿ.ರವಿಶಂಕರ್

ಹೊಸೂರು : ಕೆ.ಆರ್.ನಗರ ಪಟ್ಟಣದಲ್ಲಿ ದಿ.ಡಿ.ದೇವರಾಜಅರಸು ಸಮುದಾಯ ಭವನ ನಿರ್ಮಾಣ ಮಾಡಲು ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿ ಭವನದ ಕಾಮಗಾರಿಗೆ ಅನುದಾನ ಕೊಡಿಸಲಾಗುತ್ತದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕು ಕಛೇರಿ ಸಭಾಂಗಣದಲ್ಲಿ ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ತಾಲೂಕು ಆಡಳಿತ, ತಾಲೂಕು ಪಂಚಾಯ್ತಿ, ಪುರಸಭೆ ಹಾಗೂ ಸಾಲಿಗ್ರಾಮ ತಾಲೂಕಿನ ಮಾವನೂರು ಅರಸು ಯುವಕರ ಸೇವಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಅರಸುರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇವರಾಜಅರಸರು ಬಡವರ ಬಾಳಿನ ಆಶಾಕಿರಣವಾಗಿದ್ದು ಬಡವರು ತಮ್ಮ ಕಷ್ಟಗಳನ್ನು ತೋಡಿಕೊಳ್ಳಲು ಬಂದಾಗ ಸಮಾಧಾನ ಯಾಗಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುತ್ತಿದ್ದ ಧೀಮಂತ ನಾಯಕರಾಗಿದ್ದು ಇವರನ್ನು ಸದಾ ಸ್ಮರಿಸಬೇಕಾದ್ದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಗಣ್ಯ ಮಹನೀಯರ ಜಯಂತಿಗಳನ್ನು ಆಚರಿಸಿದರೆ ಸಾಲದು ಅವರ ಸಾಧನೆ, ಕೊಡುಗೆ ಮತ್ತು ಮಾರ್ಗದರ್ಶನಗಳನ್ನು ಪ್ರತಿಯೊಬ್ಬರೂ ಸ್ಮರಿಸಿ ಅವುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸಬೇಕು ಎಂದ ಶಾಸಕರು ಇಂದಿನ ಯುವ ರಾಜಕಾರಣಿಗಳಿಗೆ ಅರಸುರವರ ತತ್ವಾದರ್ಶಗಳನ್ನು ಪಾಲನೆ ಮಾಡಿದಾಗ ಅಧಿಕಾರವಧಿಯಲ್ಲಿ ಸಾಧನೆ ಮಾಡಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಹಿಂದುಳಿದ ವರ್ಗ, ದೀನದಲಿತರು ಮತ್ತು ಶೋಷಿತ ವರ್ಗಗಳ ಧ್ವನಿಯಾಗಿದ್ದ ಮಾಜಿ ಮುಖ್ಯಮಂತ್ರಿಗಳು ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತಂದು ರೈತರನ್ನು ಭೂಒಡೆಯರನ್ನಾಗಿ ಮಾಡಿದರು. ರೈತರ ಏಳ್ಗೆಯೇ ಜನರ ಏಳಿಗೆ ಎಂದು ಭಾವಿಸಿ ಜೀತಪದ್ಧತಿಯನ್ನು ರದ್ಧುಪಡಿಸುವುದರ ಜತೆಗೆ ಹಿಂದುಳಿದವರ ಕಲ್ಯಾಣಕ್ಕಾಗಿ ಹಾವನೂರು ಆಯೋಗವನ್ನು ರಚನೆ ಮಾಡಿದರು ಎಂದು ಮಾಹಿತಿ ನೀಡಿದರು.
ಬಡಕುಟುಂಬದಿoದ ಬಂದ ಭಾರತದ ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳ ವ್ಯಾಸಂಗದ ಅನುಕೂಲಕ್ಕಾಗಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವುದರ ಜತೆಗೆ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ.

ಅಲ್ಲದೆ ರಾಜ್ಯದಲ್ಲಿ ಜಾರಿಯಲ್ಲಿದ್ದ ಮಲಹೊರುವ ಪದ್ಧತಿಯನ್ನು ರದ್ಧುಪಡಿಸಿದರು. ಅಂತಹವರ ಆದರ್ಶ ಗುಣಗಳನ್ನು ಎಲ್ಲರೂ ಪಾಲಿಸಿದರೆ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ವಿವಿಧ ಆಟೋಟ ಸ್ಫರ್ಧೆಗಳಲ್ಲಿ ವಿಜೇತರಾದ ಮೆಟ್ರಿಕ್‌ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ವಕೀಲ ಬಿ.ಕೆ.ಶರತ್‌ಚಂದ್ರರಾಜೇಅರಸ್ ವಿಶೇಷ ಉಪನ್ಯಾಸ ನೀಡಿದರು. ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ, ಹಿರಿಯ ವಕೀಲ ಕೃಷ್ಣೇಅರಸ್ ಮಾತನಾಡಿದರು. ಜಿ.ಪಂ. ಮಾಜಿ ಸದಸ್ಯ ಜಿ.ಆರ್.ರಾಮೇಗೌಡ, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಚಂದ್ರಕಲಾ, ತಾಲೂಕು ನಿರೀಕ್ಷಕ ಜಿ.ಜೆ.ಮಹೇಶ್, ಸಿಬ್ಬಂದಿಗಳಾದ ಲೋಕೇಶ್, ಮಧುಸೂದನ್, ಸಿ.ಎಂ.ರವಿ, ಸತೀಶ್, ಗೀತಾ, ಆಶಾ, ಬೆನಕರಾಜು.ಎಂ.ಎಸ್, ದಿವ್ಯ.ಪಿ, ಬೇಬಿಶ್ರೀ, ಮುಖಂಡರಾದ ಚಲುವರಾಜು, ಎಸ್.ಪಿ.ತ್ಯಾಗರಾಜು, ಅರಸು ಯುವಕರ ಸೇವಾಭಿವೃದ್ಧಿ ಸಂಘದ ಅಧ್ಯಕ್ಷ ಮಂಜುನಾಥಅರಸ್ ಪದಾಧಿಕಾರಿಗಳಾದ ಕೃಷ್ಣೇಅರಸ್, ಚಾಮರಾಜೇಅರಸ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular