ಬಾಗಲಕೋಟೆ: ಇಂದು ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಮಾಜಿ ಶಾಸಕ ಡಾ.ಚರಂತಿಮಠ ಅವರ ಆರೋಪಕ್ಕೆ ಹಳೆ ಬಾಗಲಕೋಟೆಯ ತಮ್ಮ ಕಚೇರಿಯಲ್ಲಿ ಬಿಜೆಪಿ ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಹಾಗೂ ಡಾ|| ಶೇಖರ್ ಮಾನೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವುದು ಸಮಂಜಸವಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದರಿಂದಾಗಿ ಶಿವಾಜಿ ಮೂರ್ತಿ ಸ್ಥಾಪನೆಯಲ್ಲಿಯೂ ಬಾಗಲಕೋಟೆಯಲ್ಲಿ ಬಿಜೆಪಿಗರ ಆಣೆ ಪ್ರಮಾಣ ಫೈಟ್ ಶುರುವಾಗಿದ್ದು ಬಿಜೆಪಿ ಮಾಜಿ ಶಾಸಕ ಡಾ|| ವೀರಣ್ಣ ಚರಂತಿಮಠ ಅವರಿಗೆ ಪಿ.ಹೆಚ್.ಪೂಜಾರ್ ಸವಾಲು ಹಾಕಿದ್ದಾರೆ. ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ವಿನಾಕಾರಣ ಆರೋಪ ಮಾಡತ್ತಿದ್ದಾರೆ.
ನಾನು ಅಣೆ ಪ್ರಮಾಣ ಮಾಡಲು ಸಿದ್ಧ, ರಾಜೀನಾಮೇಗೂ ಸಿದ್ಧ. ನಾನು ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿ ಮಾಡಿಲ್ಲ…ನಾನು ಪ್ರಮಾಣ ಮಾಡಲು ಸಿದ್ಧ…ತಾಕತ್ತಿದ್ರೆ ಬನ್ನಿ ಬಾಗಲಕೋಟೆಯ ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನ ಅಥವಾ ತುಳಸಿಗೇರಿ ಆಂಜನೇಯನ ದೇವಸ್ಥಾನಕ್ಕೆ…ನೀವು ಬನ್ನಿ ನಾನೂ ಬರ್ತೇನೆ..ನಾನು ಶಿವಾಜಿ ಮಹಾರಾಜರ ಮೂರ್ತಿ ಪ್ರತಿಷ್ಠಾಪನೆಗೆ ಅಡ್ಡಿ ಪಡಿಸಿದ್ರೆ ಇಂದೇ ರಾಜೀನಾಮೆ ಕೊಡುತ್ತೇನೆ…ಏನು ನಿಮ್ಮ ಟಿಮಿ ಟಿಮಿ(ಅಂದ್ರೆ ಕಿರಿ ಕಿರಿ)…ಇನ್ನು ನಾನು ಸುಮ್ಮನೆ ಕೂಡುವುದಿಲ್ಲ ಇದು ನಿಮಗೆ ಎಚ್ಚರಿಕೆ …ಇನ್ನಾದ್ರೂ ಸುಧಾರಿಸಿ …ಸಮಾಜ ಎಲ್ಲವನ್ನು ಗಮನಿಸುತ್ತಿದೆ…ಬಿಜೆಪಿ ಪಕ್ಷದ ವರಿಷ್ಠರು ಗಮನಿಸುತ್ತಿದ್ದಾರೆ. ನನಗೂ ಬಿಜೆಪಿ ವರಿಷ್ಠರು ಬಹಳ ಆತ್ಮೀಯರು ನಿಮ್ಮ ಗಮನಕ್ಕಿರಲಿ. ಕೆಲವೊಂದಿಷ್ಟು ಬೆಂಬಲಿಗರನ್ನ ಕಟ್ಟಿಕೊಂಡು ವಿನಾಕಾರಣ ಆರೋಪ ಮಾಡುತ್ತಿದ್ದೀರಿ,ನಾನು ಹಿಂದೂ ನಾನು ಹಿಂದೂ ಅಂದ್ರೆ ಹಿಂದೂ ಆಗೊಲ್ಲ, ಹಿಂದೂ ಸಮಾಜದಲ್ಲಿ ಒಡಕು ಮೂಡಿಸುವುದು ಸಮಂಜಸವಲ್ಲವೆಂದು ವಾಗ್ದಾಳಿ ನಡೆಸಿದರು.
ಬಾಗಲಕೋಟೆ ನಗರದ ಸೋನಾರ್ ಬಡಾವಣೆಯ ಸಮೀಪ ಕಳೆದ ಆಗಸ್ಟ 14 ರ ರಾತ್ರಿ (ಆಗಸ್ಟ 15 ರ ಬೆಳಗಿನ ಜಾವ) ಮೂರ್ತಿ ಪ್ರತಿಷ್ಠಾಪನೆ ಯಾಗಿತ್ತು. ಜಿಲ್ಲಾಡಳಿತ ಅನಧಿಕೃತವೆಂದು ತೆರವುಗೊಳಿಸಿತ್ತು.
ಹೀಗಾಗಿ ಬಿಜೆಪಿಯ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಗುಂಪು ಈ ಹಿಂದೆಯೂ ಮೂರ್ತಿ ಪ್ರತಿಷ್ಠಾಪನೆಗೆ ಎಂ.ಎಲ್.ಸಿ ಪಿ.ಹೆಚ್.ಪೂಜಾರ್ ಹಾಗೂ ಡಾ.ಶೇಖರ್ ಮಾನೆ ಕಾರಣ ಎಂದು ಆರೋಪಿಸಿದ್ರು ಇನ್ನು ನಾನು ಸುಮ್ಮನೆ ಕೂಡುವುದಿಲ್ಲ ಇದು ನಿಮಗೆ ಎಚ್ಚರಿಕೆ ಇರಲಿ ಎಂದು ಕಿಡಿಕಾರಿದರು.