ಮಂಡ್ಯ: ಕಾವೇರಿ ವಿಚಾರದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಬೇಜವಬ್ದಾರಿ ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ ಕಿಡಿಕಾರಿದ್ದಾರೆ.
ಬೆಂ-ಮೈ ಹೆದ್ದಾರಿಯಲ್ಲಿ ಹೋರಾಟ ಮಾಡಿದ್ರೆ ತೊಂದರೆ ಎಂಬ ಕಾರಣದಿಂದಾಗಿ ಎಸ್ಪಿ ಅವರ ಮನವಿ ಮೇರೆಗೆ ಹಾಗಾಗಿ ಸಂಜಯ್ ವೃತ್ತದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅಶ್ವಥ್ ನಾರಾಯಣ, ಮಂಡ್ಯ ಶಾಸಕ ಗಣಿಗ ರವಿಕುಮಾರ್ ಅವರು ಕೂಡ ನೀರು ಬಿಟ್ಟಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇವತ್ತು ತೆಜ್ವಸ್ವಿ ಸೂರ್ಯ, ಸುಮಾಲತಾ, ಪಿಸಿ ಮೋಹನ್ ಬರುತ್ತಿದ್ದಾರೆ. ಇಲ್ಲಿ ಸಂಸದರ ಪ್ರಶ್ನೆ ಬರಲ್ಲ. ಕರ್ನಾಟಕದ ರೈತರಿಗೆ ಅನ್ಯಾಯ ಆಗಬಾರದು ಅಷ್ಟೆ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಗೆ ಅರ್ಜಿ ಕೊಟ್ಟರು ತಮಿಳುನಾಡಿಗೆ ಕಾಂಗ್ರೆಸ್ ನವರು ನೀರು ಬಿಡುವ ಅವಶ್ಯಕತೆ ಏನಿತ್ತು.? ಸುಪ್ರೀಂ ಕೋರ್ಟ್ ತಮಿಳುನಾಡಿನ ಅರ್ಜಿ ಸ್ವೀಕರಿಸಿದೆ. ತಮಿಳುನಾಡಿನ ಡ್ಯಾಂ ಗಳಲ್ಲಿ ನೀರು ಸ್ಟಾಕ್ ಇದೆ. ಸುಪ್ರೀಂ ಕೋರ್ಟ್ ಗೆ ಮನದಟ್ಟು ಮಾಡಿಕೊಡಬೇಕಿತ್ತು. ಕಾವೇರಿ ಮ್ಯಾನೇಜ್ಮೆಂಟ್ ನಲ್ಲಿ ಸ್ಪಷ್ಟಪಡಿಸಬೇಕಿತ್ತು ಎಂದರು.
ಡಿ.ಕೆ ಶಿವಕುಮಾರ್ ಬೆಂಗಳೂರನಲ್ಲಿ ಮಿಟಿಂಗ್ ಕರೆದು ಚಿಟ್ ಚಾಟ್ ಮಾಡ್ಕೊಂಡು ಕಾಲಹರಣ ಮಾಡ್ತಿದ್ದಾರೆ. ಯಾವುದೇ ಡ್ಯಾಂ ಗೆ ಭೇಟಿ ಕೊಟ್ಟಿಲ್ಲ. ರೈತರ ಪರಿಸ್ಥಿತಿ ಬಗ್ಗೆ ಗಮನಹರಿಸುತ್ತಿಲ್ಲ. ಎರಡು ರಾಜ್ಯದ ನೀರಿನ ಲಭ್ಯತೆ ಬಗ್ಗೆ ಗಮನ ಇಟ್ಟುಕೊಳ್ಳಬೇಕು. ಬೊಮ್ಮಯಿ ನೀರಾವರಿ ಸಚಿವರಾಗಿದ್ದಾಗ ಸುಪ್ರೀಂ ಕೋರ್ಟ್ ಗೆ ರೆಕಾರ್ಡ್ ಸಲ್ಲಿಸಿದ್ರು. ನೀರಾವರಿ ಸಚಿವರಿಗೆ ಜವಾಬ್ದಾರಿ ಇಲ್ಲ ಎಂದು ಹರಿಹಾಯ್ದರು.
ಇವತ್ತು ಒಂದು ದಿನ ನಮ್ಮ ಹೋರಾಟ ಅಲ್ಲ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನಾ ಸ್ಥಳಕ್ಕೆ ಐಜಿ ಬೋರಲಿಂಗಯ್ಯ ಭೇಟಿ ನೀಡಿ, ಪೊಲೀಸ್ ಬಂದೋಬಸ್ತ್ ಪರಿಶೀಲನೆ ನಡೆಸಿ, ಮಾಹಿತಿ ಪಡೆದರು.