Saturday, April 19, 2025
Google search engine

Homeರಾಜ್ಯಸುದ್ದಿಜಾಲಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ನೂತನ ನಿರ್ದೇಶಕರುಗಳ ಆಯ್ಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ: ನೂತನ ನಿರ್ದೇಶಕರುಗಳ ಆಯ್ಕೆ

ಹೊಸೂರು : ಕೆ.ಆರ್.ನಗರ ತಾಲೂಕಿನ ನಾರಾಯಣಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮುಂದಿನ ೫ ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಭಾನುವಾರ ಸಂಘದ ಆಡಳಿತ ಕಛೇರಿಯಲ್ಲಿ ಚುನಾವಣೆ ನಡೆಯಿತು. ಹಾಲಿ ಅಧ್ಯಕ್ಷ ಎನ್.ಎಸ್.ವಿಠಲ್ ಸಾಲಗಾರರಲ್ಲದ ಕ್ಷೇತ್ರದಿಂದ ೭೯, ಪರಿಶಿಷ್ಟ ಜಾತಿ ಮಾಲಿಂಗಯ್ಯ ೧೮೧, ಪರಿಶಿಷ್ಟ ಪಂಗಡ ರುದ್ರನಾಯಕ ೨೧೭, ಹಿಂದುಳಿದ ವರ್ಗ ಎ ಎಸ್.ಡಿ.ದಿವಾಕರ ೨೮೩, ಹಿಂದುಳಿದ ವರ್ಗ ಬಿ ಯೋಗೀಶ್ ೩೩೩, ಮಹಿಳಾ ಕ್ಷೇತ್ರದಿಂದ ಹೇಮಾವತಿ ೨೨೭, ಅನುರಾಧ ೨೨೮, ಸಾಮಾನ್ಯ ಕ್ಷೇತ್ರದಿಂದ ಎನ್.ಎಸ್.ರುದ್ರಸ್ವಾಮಿ ೩೩೩, ಮಂಜುನಾಥ್ ೨೮೦, ಎಸ್.ಕೆ.ಶಶಿಕುಮಾರ್ ೨೭೩, ಶಿವಶಂಕರ್ ೨೬೧, ಪ್ರಸನ್ನಕುಮಾರ್(ಬಾಬು) ೨೫೫ ಮತಗಳನ್ನು ಪಡೆದು ಚುನಾಯಿತರಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ಎಸ್.ರವಿ, ಸಂಘದ ಸಿಇಒ ಜಯಣ್ಣ ಕರ್ತವ್ಯ ನಿರ್ವಹಿಸಿದರು. ಒಟ್ಟು ೧೨ ಮಂದಿ ನಿರ್ದೇಶಕರ ಪೈಕಿ ೧೦ ಮಂದಿ ಎನ್.ಎಸ್.ವಿಠಲ್ ತಂಡದವರು ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಸಂಘದ ರೈತ ಸದಸ್ಯರು ಮತ್ತು ಮುಖಂಡರು ಚುನಾಯಿತ ಸದಸ್ಯರನ್ನು ಅಭಿನಂದಿಸಿದರು. ಮುಖಂಡರಾದ ಕೆ.ಎಂ.ಶ್ರೀನಿವಾಸ್, ಪುಟ್ಟೇಗೌಡ, ಕಲ್ಲಹಳ್ಳಿರಾಜನಾಯಕ, ಶಂಕರಪ್ಪ, ನಟರಾಜು, ಯತೀರಾಜ್, ಮೋಹನ್‌ಕುಮಾರ್, ನಂದೀಶ್, ಎಸ್.ಪಿ.ತ್ಯಾಗರಾಜು, ಪ್ರಸನ್ನೇಗೌಡ, ಪರಮೇಶ್, ವಿಶ್ವಾಸ್ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular