Sunday, April 20, 2025
Google search engine

Homeರಾಜಕೀಯರಾಜ್ಯದಲ್ಲಿ ಎನ್ಇಪಿ ರದ್ದು,ಹಳೆಯ ಶಿಕ್ಷಣ ನೀತಿಯೇ ಮುಂದುವರಿಕೆ-ಡಿಸಿಎಂ ಡಿಕೆಶಿ

ರಾಜ್ಯದಲ್ಲಿ ಎನ್ಇಪಿ ರದ್ದು,ಹಳೆಯ ಶಿಕ್ಷಣ ನೀತಿಯೇ ಮುಂದುವರಿಕೆ-ಡಿಸಿಎಂ ಡಿಕೆಶಿ

ಬೆಂಗಳೂರು: ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮುಂದುವರಿಸಲ್ಲ. ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸುತ್ತೇವೆ. ಸದ್ಯದಲ್ಲೇ ಸಮಿತಿ ರಚನೆ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​​​​ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ ಬಗ್ಗೆ ಸಿಎಂ ಸಭೆ ಮಾಡಿದ್ದಾರೆ. ಸಭೆಯಲ್ಲಿ ಎನ್​ಇಪಿಯ ಸಾಧಕ ಬಾಧಕ ಬಗ್ಗೆಯೂ ಚರ್ಚಿಸಿದ್ದಾರೆ. ರಾಜ್ಯದ ಶಿಕ್ಷಣ ಮಟ್ಟ ಉತ್ತಮವಾಗಿದೆ ಎಂದು ವಿಸಿಗಳು ಹೇಳಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿ ಹಲವೆಡೆ NEP ಜಾರಿ ಮಾಡಿಲ್ಲ. ಆದರೆ ಕರ್ನಾಟಕದಲ್ಲಿ ತರಾತುರಿಯಲ್ಲಿ ತರಲು ಪ್ರಯತ್ನ ಮಾಡಿದ್ದರು. ರಾಜ್ಯ ಸರ್ಕಾರ ಹೊಸ ಪಾಲಿಸಿ ತರುತ್ತೆ, ಅದಕ್ಕಾಗಿ ಸಮಿತಿ ರಚನೆ ಮಾಡಲಾಗುವುದು ಎಂದರು. ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲ್ಲ. ಹಳೆಯ ಶಿಕ್ಷಣ ನೀತಿಯನ್ನೇ ಮುಂದುವರಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಸುಪ್ರೀಂ​’ ಹೇಳಿದಂತೆ ಪೂರ್ಣ ಪ್ರಮಾಣ ನೀರು ಹರಿಸಲು ಸಾಧ್ಯವಾಗಿಲ್ಲ

ಕಾವೇರಿ ನದಿ ನೀರು ವಿಚಾರ ಕುರಿತು ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸುಪ್ರೀಂಕೋರ್ಟ್ ಹೇಳಿದಂತೆ ಪೂರ್ಣ ಪ್ರಮಾಣ ನೀರು ಹರಿಸಲು ಸಾಧ್ಯವಾಗಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ತಮಿಳುನಾಡು ಸರ್ಕಾರ ಕಾವೇರಿ ನೀರಿಗಾಗಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಈಗ ಸಿಜೆಐ ನೇತೃತ್ವದಲ್ಲಿ ಪ್ರತ್ಯೇಕ ಪೀಠ ರಚನೆ ಮಾಡಿದೆ. ಹಿಂದೆ ಕುಮಾರಸ್ವಾಮಿ ಅವರು ಕರ್ನಾಟಕ-ತಮಿಳುನಾಡಿನ ಜನ ಅಣ್ಣತಮ್ಮಂದಿರಿದ್ದಂತೆ ಎಂದಿದ್ದರು. ಹೀಗಾಗಿ ಮಾಜಿ ಸಿಎಂ ಅವರ ಹೇಳಿಕೆಯನ್ನು ನಾವು ಫಾಲೋ ಮಾಡುತ್ತಿದ್ದೇವೆ. ನಮಗೆ ರಾಜ್ಯದ ಜನರ ಹಿತಾಸಕ್ತಿ ಮುಖ್ಯ ಎಂದು ಟಾಂಗ್ ನೀಡಿದರು

RELATED ARTICLES
- Advertisment -
Google search engine

Most Popular