ಮೈಸೂರು: ಜಿಲ್ಲೆಯ ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಮದಲ್ಲಿ ಮನೆಯ ಆವರಣದಲ್ಲೇ ಗಾಂಜಾ ಗಿಡ ಬೆಳೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಶ್ವನಾಥ್ ಬಂಧಿತ ಆರೋಪಿ.
ಆರೋಪಿ ವಿಶ್ವನಾಥ್ ತನ್ನ ಮನೆಯ ಆವರಣದಲ್ಲಿ ಹೂವಿನ ಗಿಡಗಳನ್ನು ನೆಟ್ಟಿದ್ದಲ್ಲದೆ, ಇದರ ನಡುವೆ ಎರಡು ಗಾಂಜಾ ಗಿಡಗಳನ್ನು ಕೂಡ ಬೆಳೆಸಿದ್ದನು. ಈ ಗಿಡಗಳು ಸುಮಾರು 5 ರಿಂದ 6 ಅಡಿ ಎತ್ತರ ಬೆಳೆದಿದ್ದವು.
ಈ ಕುರಿತು ಮಾಹಿತಿ ತಿಳಿದ ಹುಣಸೂರು ಗ್ರಾಮಾಂತರ ಠಾಣಾ ಪೊಲೀಸರು, ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, 6 ಕೆಜಿಯಷ್ಟಿದ್ದ ಎರಡು ಗಾಂಜಾ ಹಸಿ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.