Saturday, April 19, 2025
Google search engine

Homeರಾಜ್ಯಹಾಸನ: 8 ಅಡಿ ಉದ್ದದ ಅಪರೂಪದ ಹೆಬ್ಬಾವು ಪತ್ತೆ

ಹಾಸನ: 8 ಅಡಿ ಉದ್ದದ ಅಪರೂಪದ ಹೆಬ್ಬಾವು ಪತ್ತೆ

ಹಾಸನ: ತಾಲೂಕಿನ ಕುದುರುಗುಂಡಿ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಸುಮಾರು ಎಂಟು ಅಡಿ ಉದ್ದದ ಅಪರೂಪದ ಹೆಬ್ಬಾವೊಂದು ಪತ್ತೆಯಾಗಿದೆ.

ಬೃಹತ್ ಗಾತ್ರದ ಹೆಬ್ಬಾವು 40 ಕೆಜಿ ತೂಕವಿರಬಹುದು ಎಂದು ಅಂದಾಜಿಸಲಾಗಿದೆ.

ಹಾವನ್ನು ಸೆರೆ ಹಿಡಿದ ಗ್ರಾಮಸ್ಥರು ಬಿದಿರು ಬಂಬ್‌ ಗೆ ಹಾವನ್ನು ಕಟ್ಟಿಕೊಂಡು ಗ್ರಾಮಕ್ಕೆ ಹೊತ್ತು ತಂದು ತಂತಿಯ ಪಂಜರದೊಳಕ್ಕೆ ಕೂಡಿ ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ನಂತರ ಹೆಬ್ಬಾವನ್ನು ಅರಣ್ಯ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

ಹೆಬ್ಬಾವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ದುದ್ದ ಗ್ರಾಮದ ವ್ಯಾಪ್ತಿಯ ಸಂರಕ್ಷಿತ ಅರಣ್ಯ ವಲಯಕ್ಕೆ ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular