Saturday, April 19, 2025
Google search engine

Homeರಾಜ್ಯತುಮಕೂರು: ವೇತನ ಪಾವತಿಸದ ಏಜೆನ್ಸಿ- ಇಂದಿರಾ ಕ್ಯಾಂಟೀನ್ ಬಂದ್ ಮಾಡಿ ಸಿಬ್ಬಂದಿಗಳ ಪ್ರತಿಭಟನೆ

ತುಮಕೂರು: ವೇತನ ಪಾವತಿಸದ ಏಜೆನ್ಸಿ- ಇಂದಿರಾ ಕ್ಯಾಂಟೀನ್ ಬಂದ್ ಮಾಡಿ ಸಿಬ್ಬಂದಿಗಳ ಪ್ರತಿಭಟನೆ

ತುಮಕೂರು: ತುಮಕೂರು ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟಿನ್ ಸಿಬ್ಬಂದಿಗಳಿಗೆ ಸಂಬಳ ನೀಡದ ಹಿನ್ನೆಲೆ ನಗರದ ನಾಲ್ಕು ಇಂದಿರಾ ಕ್ಯಾಂಟೀನ್ ಬಂದ್ ಆಗಿವೆ.

ಮಹಾನಗರ ಪಾಲಿಕೆ ಆವರಣ, ಕ್ಯಾತಸಂದ್ರ, ಮಂಡಿಪೇಟೆ, ಶಿರಾ ಗೇಟ್ ನ ಕ್ಯಾಂಟೀನ್  ಮುಚ್ಚಿದ್ದು, ಉಪ್ಪಿಟ್ಟು, ಇಡ್ಲಿ ಚಟ್ನಿ ತಿಂಡಿ ತಯಾರು ಮಾಡಿಟ್ಟು, ಗ್ರಾಹಕರಿಗೆ ನೀಡದೇ ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ತಿಂಡಿ ತಿನ್ನಲು ಬಂದ ಗ್ರಾಹಕರು ವಾಪಾಸ್ಸಾಗಿದ್ದಾರೆ.

ಕಳೆದ 8 ತಿಂಗಳಿಂದ ರಿವಾರ್ಡ್ಸ್ ಏಜೆನ್ಸಿ ಸಿಬ್ಬಂದಿಗಳಿಗೆ ಸಂಬಳ  ನೀಡಿಲ್ಲ. ಇದರಿಂದ ಆಕ್ರೋಶಗೊಂಡ  30 ಸಿಬ್ಬಂದಿಗಳು ಪ್ರತಿಭಟನೆ ನಡೆಸಿದ್ದಾರೆ.

RELATED ARTICLES
- Advertisment -
Google search engine

Most Popular