Saturday, April 19, 2025
Google search engine

Homeಅಪರಾಧಮಂಗಳೂರು: ಎಪಿಎಂಸಿ ಹರಾಜು ಕಟ್ಟೆಯಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಎಪಿಎಂಸಿ ಹರಾಜು ಕಟ್ಟೆಯಲ್ಲಿ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಬೈಕಂಪಾಡಿ ಎಪಿಎಂಸಿ ಹರಾಜುಕಟ್ಟೆಯ ಒಳಗಡೆ ಐದು ದಿನಗಳ ಹಿಂದೆ ಕೊಲೆಗೀಡಾಗಿದ್ದ ವ್ಯಕ್ತಿಯ ಗುರುತನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

ಕೊಲೆಗೀಡಾದವರು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಅಮ್ಮೆತ್ತಿ ಹೌಸ್ ನಿವಾಸಿ ರಾಮಣ್ಣ ಪೂಜಾರಿ ಎಂಬವರ ಮಗ ಚಂದ್ರಹಾಸ ಪೂಜಾರಿ ಎಂದು ತಿಳಿದು ಬಂದಿದೆ.

ಆದರೆ ಚಂದ್ರಹಾಸ ಪೂಜಾರಿಯವರ ವಾರಸುದಾರರ ಬಗ್ಗೆ ಈವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರ ವಾರಸುದಾರರು ಯಾರಾದರೂ ಇದ್ದಲ್ಲಿ ಪಣಂಬೂರು ಪೊಲೀಸ್ ಠಾಣೆ ದೂ.ಸಂ.: 0824-2220530, 9480805355, 9480805331 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ 0824-2220800ಕ್ಕೆ ಮಾಹಿತಿ ನೀಡುವಂತೆ ಪಣಂಬೂರು ಪೊಲೀಸರು ಮನವಿ ಮಾಡಿದ್ದಾರೆ.

ಚಂದ್ರಹಾಸ ಪೂಜಾರಿಯವರ ಮೇಳೆ ಆ.17ರಂದು ರಾತ್ರಿ ಬೈಕಂಪಾಡಿ ಎಪಿಎಂಸಿಯ ಹರಾಜುಕಟ್ಟೆಯ ಒಳಗಡೆ ಅಪರಿಚಿತರು ಗಂಭೀರ ಸ್ವರೂಪದ ಹಲ್ಲೆ ನಡೆಸಿ ಕೊಲೆಗೈದಿದ್ದರು.

ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

RELATED ARTICLES
- Advertisment -
Google search engine

Most Popular