Saturday, April 19, 2025
Google search engine

Homeಸ್ಥಳೀಯಮೈಸೂರು:ಗಬ್ಬುನಾರುತ್ತಿದ್ದ ಕಸ ಹಾಕುವ ಜಾಗವೀಗ ಚಿತ್ತಾಕರ್ಷಕ ತಾಣ!

ಮೈಸೂರು:ಗಬ್ಬುನಾರುತ್ತಿದ್ದ ಕಸ ಹಾಕುವ ಜಾಗವೀಗ ಚಿತ್ತಾಕರ್ಷಕ ತಾಣ!

ಮೈಸೂರು: ಕೆಲ ದಿನಗಳ ಹಿಂದೆ ಜನರು ಮೂಗು ಮುಚ್ಚಿಕೊಂಡು ಓಡಾಡುವಂತಿದ್ದ ಸ್ಥಳವೀಗ ಸ್ಥಳೀಯ ಮಕ್ಕಳು, ಹಿರಿಯರು ಸಂತೋಷದಿoದ ವಿರಮಿಸುವ ತಾಣವಾಗಿ ಪರಿಣಮಿಸಿದೆ.
ಪಾಲಿಕೆ ಸದಸ್ಯ ಎಸ್‌ಬಿಎಂ ಮಂಜು ಅವರು ತಮ್ಮ ಗೋಕುಲಂನ ಕೆಆರ್ ರಸ್ತೆಯ ಜಂಕ್ಷನ್‌ನ ಒಂದು ಮೂಲೆಯಲ್ಲಿ ರಾಶಿಗಟ್ಟಲೆ ಕಸ ತಂದು ಸುರಿಯುತ್ತಿರುವುದರನ್ನು ಗಮನಿಸಿದರು. ಮಾತ್ರವಲ್ಲದೇ ಇಲ್ಲಿ ಕಸ ಸುರಿಯಬೇಡಿ ಎಂದು ಮನವಿ ಮಾಡಿದರು. ಆದರೂ ಯಾವುದೇ ಪ್ರಯೋಜನವಾಗದೇ ಯಥಾಸ್ಥಿತಿ ಮುಂದುವರಿದಿತ್ತು.
ದೇಶದಾದ್ಯಂತ ನಡೆಯುತ್ತಿರುವ ಸ್ವಚ್ಚ ಸರ್ವೇಕ್ಷಣ್ ಅಭಿಯಾನದಲ್ಲಿ ಮೈಸೂರು ಪಾಲ್ಗೊಂಡಿದೆ. ಈ ಅಭಿಯಾನದಲ್ಲಿ ನಮ್ಮ ಮೈಸೂರಿಗೆ ದೇಶದಲ್ಲಿಯೇ ಮೊದಲ ಸ್ಥಾನ ದೊರೆಯಬೇಕಾದರೆ ನಗರದಲ್ಲಿ ಸ್ಥಳೀಯರು ಸ್ವಚ್ಛತೆ ಕಾರ್ಯದಲ್ಲಿ ಹೇಗೆ ಸಹಕರಿಸುತ್ತಿದ್ದಾರೆ ಎಂಬುದೂ ಮುಖ್ಯವಾಗುತ್ತದೆ. ಹಾಗಾಗಿ ಇಲ್ಲಿ ಕಸದ ರಾಶಿ ಇದ್ದರೆ ಕೆಟ್ಟ ಸಂದೇಶ ಹೋಗುತ್ತದೆ ಎಂದು ನಿರ್ಧರಿಸಿ ಸ್ಥಳೀಯ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮoಜು ಅವರು, ಕಸ ಹಾಕುವ ಜಾಗವನ್ನು ಕುಳಿತುಕೊಂಡು ವಿರಮಿಸುವ ವಿಶೇಷ ತಾಣವಾಗಿ ಪರಿವರ್ತಿಸಿದರು. ಸದ್ಯ ಈ ಬದಲಾವಣೆಯಿಂದ ಆದ ಉಪಯೋಗವನ್ನು ಸ್ಥಳೀಯರು ಗಮನಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಸ ಹಾಕುತ್ತಿದ್ದ ಜಾಗದಲ್ಲಿ ಕುಳಿತುಕೊಳ್ಳಲು ಆಸನ, ಮಕ್ಕಳು ಆಟವಾಡಲು ಸ್ಥಳಾವಕಾಶ, ಗೋಡೆಯ ಮೇಲೆ ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ. ಬೃಂದಾವನ ಬಡಾವಣೆಯಲ್ಲಿಯೂ ಒಂದು ಜಾಗದಲ್ಲಿ ಇದೇ ರೀತಿ ಕಸ ಹಾಕುತ್ತಿದ್ದ ಸ್ಥಳವನ್ನು ಜನರು ವಿರಮಿಸಬಹುದಾದ ಆಕರ್ಷಕ ತಾಣವಾಗಿ ಪರಿವರ್ತಿಸಲಾಗಿದೆ. ಇದೇ ರೀತಿ ಉಳಿದ ಬಡಾವಣೆಗಳಲ್ಲಿಯೂ ಬದಲಾವಣೆ ತರಲಾಗುತ್ತಿದೆ ಎಂದು ಎಸ್‌ಬಿಎಂ ಮಂಜು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಕೆ.ಹರೀಶ್ ಗೌಡ ಮಾತನಾಡಿ, ಉತ್ತಮವಾದ ಕೆಲಸವನ್ನು ಪಾಲಿಕೆ ಸದಸ್ಯ ಎಸ್‌ಬಿಎಂ.ಮoಜು ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಗೋಕುಲಂ ಉತ್ತಮವಾದ ನಗರ ಸಹೃದಯಿ ಜನಗಳು. ಮೈಸೂರು ಇನ್ನು ಹೆಚ್ಚು ಸ್ವಚ್ಛವಾಗಿರಬೇಕೆಂದರು. ಯುವರಾಜ ಕಾಲೇಜು ನಿವೃತ್ತ ಪ್ರಾಂಶುಪಾಲೆ ಅಶ್ವತಿ ಉದ್ಘಾಟಿಸಿದರು, ಸ್ಥಳೀಯರಾದ ಆದಿರಾಜ್, ಮಹದೇವು ಕುಮಾರ್, ದಿನಕರ್, ಹನುಮೇಗೌಡ, ಪಾಲಿಕೆ ಎಂಜಿನಿಯರ್ ರಾಮು, ಅಭಿವೃದ್ಧಿ ಅಧಿಕಾರಿ ಮನುಗೌಡ ಹಾಗೂ ಇತರರು ಇದ್ದರು.

RELATED ARTICLES
- Advertisment -
Google search engine

Most Popular