ಮೈಸೂರು: ಮಗ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಮನನೊಂದ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ವಿದ್ಯಾನಗರ ಬಡಾವಣೆಯಲ್ಲಿ ನಡೆದಿದ್ದು, ಈ ವಿಚಾರದಿಂದ ಮನನೊಂದಿದ್ದ ಆರೋಪಿಯ ತಂದೆಯೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ರಾತ್ರಿ ನಗರದ ವಿದ್ಯಾನಗರದ ೪ನೇ ಕ್ರಾಸ್‌ನ ನಿವಾಸಿ ಬಾಲರಾಜ್ ಎಂಬುವನನ್ನು ಕ್ಷುಲ್ಲಕ ಕಾರಣಕ್ಕಾಗಿ ೪ ಜನ ಸ್ನೇಹಿತರು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.
ಈ ಸಂಬoಧ ಸ್ನೇಹಿತರಾದ ತೇಜಸ್, ಸಂಜಯ್, ಕಿರಣ್ ಹಾಗೂ ಸಾಮ್ರಾಟ್ ಎಂಬ ಯುವಕರು ಆರೋಪಿಗಳು ಎಂದು ಪೊಲೀಸರು ಈ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನೂ ಬಂಧಿಸಿದ್ದರು.
ತೇಜಸ್ ತಾಯಿ ಆತ್ಮಹತ್ಯೆ: ಸ್ನೇಹಿತ ಬಾಲರಾಜ್ ಕೊಲೆ ಪ್ರಕರಣದಲ್ಲಿ ನನ್ನ ಮಗ ತೇಜಸ್ ಭಾಗಿಯಾಗಿದ್ದಾನೆ ಎಂದು ಮನನೊಂದ ತಾಯಿ ಇಂದ್ರಾಣಿ (೩೫) ಜೊತೆ ಕೊಲೆಯಾದ ಬಾಲರಾಜ್ ತಾಯಿ ಮನೆಗೆ ಬಂದು ಗಲಾಟೆ ಮಾಡಿದ್ದರು. ಈ ವೇಳೆ, ಮಗನನ್ನು ಪೊಲೀಸರು ಜೈಲಿಗೆ ಕಳುಹಿಸುತ್ತಾರೆ ಎಂಬ ವಿಚಾರ ತಿಳಿದು ತಾಯಿ ಇಂದ್ರಾಣಿ ಸೋಮವಾರ ಸಂಜೆ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗ ತೇಜಸ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಹೆಂಡತಿ ಇಂದ್ರಾಣಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದು, ಈ ವಿಷಯ ತಿಳಿದ, ಅದೇ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದ ತೇಜಸ್ ತಂದೆ ಸಾಮ್ರಾಟ್ ಕಳೆದ ರಾತ್ರಿ ಜೈಲಿನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಇಬ್ಬರ ಮೃತ ದೇಹಗಳನ್ನು ಕೆ.ಆರ್. ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಇಂದ್ರಾಣಿ ಪ್ರಕರಣದ ಕುರಿತು ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ತಂದೆ ಸಾಮ್ರಾಟ್ ಹೃದಯಾಘಾತದಿಂದ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬoಧಿಸಿದoತೆ ಮಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.