ಹೊಸೂರು: ಮೈಸೂರಿನ ಟೆರಿಷನ್ ಕಾಲೇಜಿನ ಎಂ.ಕಾಂ.ವಿದ್ಯಾರ್ಥಿನಿ ಎಚ್.ಆರ್.ಅಕ್ಷತಾ ಅವರು ಮೈಸೂರು ವಿಶ್ವವಿದ್ಯಾನಿಲಯದ ಎಂ.ಕಾಂ.ಸಾತ್ನಕೋತರ ಪದವಿಯಲ್ಲಿ ಹಣಕಾಸು ಮತ್ತು ನಿರ್ವಹಣೆಯಲ್ಲಿ ವಿಷಯದಲ್ಲಿ 2021-22ನೇ ಸಾಲಿನಲ್ಲಿ ಚಿನ್ನದ ಪದಕ ಪಡೆದಿದ್ದಾಳೆ.
ಇತ್ತಿಚಿಗೆ ಟೆರಿಷನ್ ಕಾಲೇಜಿನ ಮರಿಯಾ ಗೊಲ್ಡನ್ ಜುಬಲಿ ಅಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಇವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಈಕೆ ಸಾಲಿಗ್ರಾಮ ತಾಲೂಕಿನ ಹಳಿಯೂರು ಗ್ರಾಮದ ರಾಜಕುಮಾರ್ ಮತ್ತು ಕುಸುಮ ದಂಪತಿಯ ಪುತ್ರಿ. ಈಕೆಯ ಸಾಧನೆಯನ್ನು ನಿವೃತ್ತ ಆಹಾರ ನಿರೀಕ್ಷಕ ಹನುಮಂತೇಗೌಡ ಅಭಿನಂದಿಸಿದ್ದಾರೆ.